ಬೆಂಗಳೂರು: ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.
“ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಇಲ್ಲ ವಿರೋಧಿಯೂ ಅಲ್ಲ” ಎಂದು ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
Advertisement
ನನ್ನ ಫೋಟೋವನ್ನು ರಾಜಕೀಯವಾಗಿ ಬಳಸಿರುವುದು ಕಂಡು ಬಂದಿದೆ ಹಾಗಾಗಿ ನನ್ನ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ
ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ.
ಜೈ ಭಾರತಾಂಬೆ ಜೈ ಕರ್ನಾಟಕ
ಜೈ ಹಿಂದ್ ಜೈ ಮುಂದ್
— ʏᴏɢᴀʀᴀᴊ ʙʜᴀᴛ (@yogarajofficial) April 20, 2018
Advertisement
ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪಕ್ಷವೊಂದಕ್ಕೆ ಸಪೋರ್ಟ್ ಮಾಡಿ ಎಂದು ಹೇಳಿಕೆಯೊಂದಿಗೆ ನಿರ್ದೇಶಕ ಯೋಗರಾಜ್ ಭಟ್ ಭಾವಚಿತ್ರವಿರುವ ಪೋಸ್ಟ್ ವೈರಲ್ ಆಗಿತ್ತು. ಹೀಗಾಗಿ ತಾವು ಯಾವುದೇ ಪಕ್ಷಕ್ಕೂ ಸೇರಿಲ್ಲ ಎಂಬುದನ್ನು ಯೋಗರಾಜ್ ಭಟ್ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.
Advertisement
ಟ್ವೀಟ್ ನಲ್ಲಿ ಏನಿದೆ?
ನನ್ನ ಫೋಟೋವನ್ನು ರಾಜಕೀಯವಾಗಿ ಬಳಸಿರುವುದು ಕಂಡು ಬಂದಿದೆ ಹಾಗಾಗಿ ನನ್ನ ನಿಲುವನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ನಾನು ನಿಷ್ಪಕ್ಷಪಾತಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಯಾವುದಾದರೂ ಸರ್ಕಾರದ ಕೆಲಸ ಇದ್ದರೆ ಮಾಡುತ್ತೇನೆ ಹೊರತು ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ. ಜೈ ಭಾರತಾಂಬೆ ಜೈ ಕರ್ನಾಟಕ. ಜೈ ಹಿಂದ್ ಜೈ ಮುಂದ್.