ಧಾರವಾಡ: ಮೋಹನ್ ಲಿಂಬಿಕಾಯಿಯಷ್ಟು ರಾಜಕೀಯ ಜ್ಞಾನ ನನಗೆ ಇಲ್ಲ, ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ನನಗೆ ಬಿಜೆಪಿಗೆ ಯಾರು ಕರೆದಿದ್ದಾರೆ, ಯಾರು ಬಿಟ್ಟಿದ್ದಾರೆ ಎನ್ನುವುದು ಈಗ ಯಾಕೆ, ಚುನಾವಣೆ ಬರಲಿ, ಬಂದಾಗ ಎಲ್ಲವೂ ಗೊತ್ತಾಗುತ್ತದೆ. ನನಗೆ ಬಿಜೆಪಿಗೆ ಕರೆದವರು ಸುಮ್ಮನೆ ಕುಳಿತಿದ್ದೇಕೆ ಎಂದು ನನಗೂ ಗೊತ್ತಿಲ್ಲ, ಬೇರೆ ವಿಷಯ ಇದ್ದರೇ ಹೇಳಿ, ಆ ವಿಷಯ ಯಾಕೆ ಎಂದಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ
ಕಳೆದ ಸ್ವಲ್ಪ ದಿನ ಹಿಂದೆಯಷ್ಟೇ ಬಿಜೆಪಿ ಮುಖಂಡ ಮೋಹನ್ ಲಿಂಬಿಕಾಯಿ, ಹೊರಟ್ಟಿ ಬಿಜೆಪಿ ಸೇರಲ್ಲ. ಅಲ್ಲದೇ ಅವರಿಗೆ ಯಾರೂ ಕೂಡಾ ನಮ್ಮ ಪಕ್ಷಕ್ಕೆ ಆಹ್ವಾನ ನೀಡಿಲ್ಲ ಎಂದು ಹೇಳಿದರು. ಸದ್ಯ ಹೊರಟ್ಟಿ ಆ ಬಗ್ಗೆ ಈಗ ಏನೂ ಬೇಡ ಎಂದು ಹೇಳುವ ಮೂಲಕ ಜಾರಿಕೊಂಡರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಈಗಲಾದರೂ ಸತ್ಯ ಹೊರಬರುತ್ತದೆ ಎಂಬ ಆಶಾಭಾವನೆ ಬಂದಿದೆ. ಪ್ರಕರಣದಲ್ಲಿ ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ನಾಗರಾಜ್ ವಿಚಾರಣೆ ನಡೆದಿದೆ. ಈಗ ಅವರನ್ನು ಕರೆಸಿದ್ದಾರೆ. ಆ ವಿಚಾರಣೆಯ ಫಲಿತಾಂಶ ಬರಲಿ ಎಂದರು.
ಫಲಿತಾಂಶ ಬರುವವರೆಗೂ ನಾವೇನು ಹೇಳುವುದಕ್ಕೆ ಆಗುವುದಿಲ್ಲ, ಮೇಲ್ನೋಟಕ್ಕೆ ಆರೋಪ ಕಂಡು ಬಂದಾಗ ವಿಚಾರಣೆಗೆ ಕರೆದಿರುತ್ತಾರೆ. ಇಂಥವೆಲ್ಲ ಬಹಳ ದಿನಗಳಿಂದ ನಡೆದಿದ್ದವು, ಇನ್ನು ಮುಂದೆ ನಡೆಯಬಾರದು, ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ನಡು ರಸ್ತೆಯಲ್ಲಿ ಜಡೆ ಜಗಳ – ಎರಡು ಗುಂಪಿನ ವಿದ್ಯಾರ್ಥಿನಿಯರ ಜಗಳ ಬಿಡಿಸಲು ಜನ ಹರಸಾಹಸ
ನಂಬಿಕೆ ಎನ್ನುವುದು ಮುಖ್ಯ, ತನಿಖೆ ಮಾಡುವವರು ಸರಿಯಾದ ರೀತಿಯ ತನಿಖೆ ಮಾಡಬೇಕು. ಇಲ್ಲದೇ ಹೋದಲ್ಲಿ ನಾಳೆ ಅವರ ಮೇಲೂ ಬರುತ್ತದೆ. ಪರೀಕ್ಷೆ ಎಂದರೆ ಎಷ್ಟೋ ಜನ ಜೀವ ತ್ಯಾಗ ಮಾಡಿ ಓದಿರುತ್ತಾರೆ. ಅಂಥವರಿಗೆ ಏನೂ ಮಾಡಬಾರದು, ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಸಿಗುತ್ತಾರೆ. ಯಾವುದೇ ವ್ಯಕ್ತಿ ಇರಲಿ, ನಂಬಿಕೆ ಎನ್ನುವುದು ಮುಖ್ಯ, ಆ ನಂಬಿಕೆಗೆ ದ್ರೋಹ ಮಾಡುವುದು ಸರಿಯಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.