ರಾಯಚೂರು: ಕುತ್ತಿಗೆ ಕೊಯ್ದರು ಬಿಜೆಪಿಯನ್ನ ನಾನು ಬಿಡುವುದಿಲ್ಲ. ರಾಯಣ್ಣ ಬ್ರಿಗೇಡ್‍ಗೂ ನನಗೂ ಸಂಬಂಧವಿಲ್ಲ. ಬ್ರಿಗೇಡ್‍ನವರು ಅಭ್ಯಾಸ ವರ್ಗ ಮುಂದೂಡಿದ್ದಾರೆ ಅವರೇ ದಿನಾಂಕ ನಿರ್ಧಾರ ಮಾಡ್ತಾರೆ ಅಂತ ವಿಧಾನಪರಿಷತ್ ವಿರೋಧಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಕೆಜೆಪಿ ಕಟ್ಟದಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ
Advertisement
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಹೊಗಳಿದ ಅವರು, ಯಡಿಯೂರಪ್ಪ ಓರ್ವ ಆದರ್ಶ ರಾಜಕಾರಣಿ. ಪ್ರವಾಸಗಳ ಮೂಲಕ ಜನರ ಸಮಸ್ಯೆ ಅರಿತವರು. ಅವರಿಗೆ ನನ್ನನ್ನ ಹೋಲಿಸಬೇಡಿ ಎಂದರು. ಮೇ 18 ರಿಂದ ಬಿಎಸ್‍ವೈ ಜೊತೆ ಬರ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡುವುದಾಗಿ ಈಶ್ವರಪ್ಪ ತಿಳಿಸಿದರು.
Advertisement
ಇದನ್ನೂ ಓದಿ: ನನ್ನ ವಿರುದ್ಧ ಕ್ರಮಕೈಗೊಳ್ಳೋದಾಗಿ ಬಿಎಸ್‍ವೈ ಹೇಳಿ ಹಲವು ವರ್ಷಗಳೇ ಆಯ್ತು: ಈಶ್ವರಪ್ಪ
Advertisement
Advertisement
ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್‍ನ ನಾಲ್ಕು ವರ್ಷದ ಸಾಧನೆಯಿಂದ ಪಕ್ಷದ ಆಂತರಿಕ ಬೆಂಕಿ ಹೊರಗೆ ಬಂದಿದೆ. ಸಿಎಂ ತಮ್ಮ ನೇತೃತ್ವದಲ್ಲಿ ಚುನಾವಣೆ, ನಾನೇ ಮುಂದಿನ ಸಿಎಂ ಅಂತಿದ್ರು. ಈಗ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಅಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು
ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿನ ಜಂತಕಲ್ ಮೈನಿಂಗ್ ಅಕ್ರಮ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜನಕ್ಕೆ ಸಮಾಧಾನ ಹೇಳುವ ರೀತಿಯಲ್ಲಿ ನಡೆದುಕೊಳ್ಳಿ. ಯಡಿಯೂರಪ್ಪ ಮೇಲೆ ಆರೋಪ ಬಂದಾಗ ಪ್ರಶ್ನೆ ಮಾಡಿದ್ರಿ, ಈಗ ನಿಮ್ಮ ಮೇಲೆ ಆರೋಪ ಬಂದಿದೆ ಉತ್ತರಕೊಡಿ ಎಂದು ಎಚ್‍ಡಿಕೆಯನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್‍ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ
ಬೆಳೆ ನಷ್ಟ ಪರಿಹಾರ ವಿತರಣೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಉತ್ತರಕುಮಾರನ ಪೌರುಷದ ಮಾತು ಬಿಟ್ಟು ಸಿಎಂ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ 1,782 ಕೋಟಿ ರೂ. ಮಂಜೂರು ಮಾಡಿದೆ. ಎನ್‍ಡಿಆರ್‍ಎಫ್ ಪ್ರಕಾರ 1685 ಕೋಟಿ ರೂ. ಬಿಡುಗಡೆಯಾಗಿದೆ. ಆದ್ರೆ ಇದುವರೆಗೆ ಕೇವಲ 1,104 ಕೋಟಿ ಮಾತ್ರ ಪರಿಹಾರ ವಿತರಣೆಯಾಗಿದೆ. ಇನ್ನೂ 580 ಕೋಟಿ ರೂಪಾಯಿ ಅನುದಾನ ವಿತರಣೆಯಾಗಿಲ್ಲ ಎಂದು ಆರೋಪಿಸಿದರು.