ವಿಜಯಪುರ: ನಾನು ಯಾವುದೇ ಹೊಂದಾಣಿಕೆಗೆ ಒಪ್ಪಲ್ಲ. ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ. ಒಬ್ಬೊಬ್ಬರೇ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ನಾವೆಲ್ಲರು ನಿರ್ಧರಿಸಿದ್ದೇವೆ. ಏನೇ ಇದ್ದರು ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ( Basanagouda Patil Yatnal ) ಹೇಳಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಡಿಕೆಶಿಯವರು ವಿಜಯೇಂದ್ರ ಶಾಸಕನಾಗಿ ಅಯ್ಕೆ ಆಗಲು ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಈ ಹೊಂದಾಣಿಕೆ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ. ಈಗ ಡಿಕೆಶಿ (DK Shivakumar) ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಹೊಂದಾಣಿಕೆಗಾರರ ಜೊತೆ ನನ್ನ ಹೊಂದಾಣಿಕೆ ಇಲ್ಲ. ಸಂಘದವರು, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದರೆ ಅವರ ಜೊತೆ ಮಾತುಕತೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಬ್ರೂಸ್ಲಿ ಅಭಿಮಾನಿಯ ಸಾಹಸ – ಹಲ್ಲಿನಿಂದ 1 ಟನ್ ತೂಕದ ಕಾರು ಎಳೆದ ಯುವಕ
Advertisement
Advertisement
ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕೆ ಪಾಟೀಲ ಅವರು ಬರುವವರಿದ್ದರು. ಅವರಿಗೆ ಡೆಂಗ್ಯೂ ಬಂದ ಕಾರಣ ಬರಲಿಲ್ಲ. ಇನ್ನು ಹಲವರು ಬರುವವರಿದ್ದಾರೆ, ಮುಂದಿನ ದಿನಗಳಲ್ಲಿ ಯಾರೆಲ್ಲಾ ಬರುತ್ತಾರೆ ನೋಡಿ ಎಂದರು. ನಮ್ಮ ಬಿಜೆಪಿಯವರು ನಿಷ್ಠಾವಂತರು. ಇದು ಬಿಜೆಪಿ(BJP) ಬಂಡಾಯ ಎಂದು ಮಾಧ್ಯಮದವರು ಸುದ್ದಿ ಮಾಡಬೇಡಿ. ಕೈ ಮುಗಿದು ಹೇಳುತಿದ್ದೇನೆ ಎಂದರು. ಇದನ್ನೂ ಓದಿ: 12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ
Advertisement
ಹೈಕಮಾಂಡ್ ಅನುಮತಿ ಪಡೆದು ನಾವು ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ(BJP) ಸಂವಿಧಾನ ವಿರೋಧಿ ಇದೆ, ಬಿಜೆಪಿಗೆ ಬಹುಮತ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ. ಮೀಸಲಾತಿ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದಾರೆ. ಇದರಿಂದ ನಮಗೆ 240 ಸೀಟ್‌ಗಳು ಬಂದಿವೆ. ಜನರ ಮನಸ್ಸಲ್ಲಿ ಇರುವ ತಪ್ಪು ಭಾವನೆಯನ್ನು ಹೋಗಲಾಡಿಸಲು ನಾವು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನೀರಜ್ ಚೋಪ್ರಾ – ಮನು ಭಾಕರ್ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್
Advertisement
ಸಿಎಂ ಸಿದ್ದರಾಮಯ್ಯ(CM Siddaramaiha) ಅವರು 187 ಕೋಟಿ ರೂ. ಅಲ್ಲ 82 ಕೋಟಿ ರೂ. ಮಾತ್ರ ಭ್ರಷ್ಟಾಚಾರ ಆಗಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. 82 ಕೋಟಿ ರೂ. ಅದು ದಲಿತರ ಹಣ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆನೇಕಲ್‍ನಲ್ಲಿ ವಿದ್ಯುತ್ ಶಾಕ್‍ಗೆ ಯುವ ಇಂಜಿನಿಯರ್ ಬಲಿ
ಸಿಎಂ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನ ದೋಚಿದ್ದಾರೆ. ನಮ್ಮ ಪಕ್ಷ ಆಡಳಿತದಲ್ಲಿದ್ದಾಗ ದಲಿತರಿಗೆ, ಹಿಂದುಳಿದವರಿಗೆ ಸೇರಿದ ಹಣವನ್ನ ಸದುಪಯೋಗ ಮಾಡಿತ್ತೇ? ಇದರೆಲ್ಲದರ ಬಗ್ಗೆ ಪಾದಯಾತ್ರೆ ಮಾಡಿ ಜನರಿಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತೇವೆ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಇದಕ್ಕೆ ಯಾರು ಬೇಕಾದರೂ ಬರಬಹುದು ಎಂದರು. ಇದನ್ನೂ ಓದಿ: ವೈದ್ಯೆ ಅತ್ಯಾಚಾರ, ಕೊಲೆ ಖಂಡಿಸಿ ರೊಚ್ಚಿಗೆದ್ದ ಪ್ರತಿಭಟನಾಕಾರರು – ಆಸ್ಪತ್ರೆಗೆ ನುಗ್ಗಿ ದಾಂಧಲೆ
ದೇವೇಗೌಡರ ಪತ್ನಿ ಹೆಸರಲ್ಲಿ ಕೆರೆ ಒತ್ತುವರಿ ವಿಚಾರ 1974 ರಲ್ಲಿ ನಡೆದಿದೆ. ಆದರೆ ಈಗ ಅದು ಹೊರಬಂದಿದೆ. ಇಷ್ಟು ದಿನ ಏನು ಮಾಡುತ್ತಿದ್ದರು? ಯಡ್ಡಿಯೂರಪ್ಪ (Yediyurappa) ಸರ್ಕಾರ ಇತ್ತು, ಕಾಂಗ್ರೆಸ್ ಸರ್ಕಾರ ಇತ್ತು ಆಗ ಯಾಕೆ ಇದನ್ನ ತನಿಖೆ ಮಾಡಿಸಲಿಲ್ಲ? ತನಿಖೆ ಮಾಡಿಸಿ ತಪ್ಪಿದ್ದರೆ ಶಿಕ್ಷೆ ಕೊಡಬೇಕಿತ್ತು. ಆಗ ಸುಮ್ಮನಿದ್ದು ಈಗ ಸಿಎಂ ವಿಚಾರ ಹೊರ ಬಂತು ಎಂದು ಇದನೆಲ್ಲ ಬಹಿರಂಗ ಮಾಡುತ್ತಿದ್ದಾರೆ. ಅವರ ತಪ್ಪುಗಳನ್ನು ಇವರು ಮುಚ್ಚುವುದು, ಇವರ ತಪ್ಪುಗಳನ್ನು ಅವರು ಮುಚ್ಚುವುದು. ಎಲ್ಲರೂ ಇದೆ ರೀತಿ ಹೊಂದಾಣಿಕೆ ಮಾಡುತ್ತಾ ಬಂದಿದ್ದಾರೆ. ಇದೇ ಹೊಂದಾಣಿಕೆ ಎಂದು ನಾನು ಹೇಳುತ್ತಿರುವುದು ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ