ನವದೆಹಲಿ: ನನಗಿನ್ನೂ ಅಧಿಕೃತವಾಗಿ ನೋಟಿಸ್ ಬಂದಿಲ್ಲ. ವಾಟ್ಸಪ್‌ನಲ್ಲಿ ಬಂದಿದ್ದನ್ನು ನಾನು ನಂಬುವುದಿಲ್ಲ ಎಂದು ಬಿಜೆಪಿಯ ರೆಬೆಲ್ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿಳಿಸಿದ್ದಾರೆ.
I will respond to the notice issued by the BJP Disciplinary Committee Chairman, while also presenting the facts regarding the current state of the BJP in Karnataka. My commitment to the fight for Hindutva, opposition to corruption, Waqf-related issues, and dynasty politics will… https://t.co/i1jk9jsmdO
— Basanagouda R Patil (Yatnal) (@BasanagoudaBJP) December 2, 2024
ಬಿಜೆಪಿಯ (BJP) ಶಿಸ್ತು ಸಮಿತಿಯಿಂದ ಬಂದಂತಹ ಶೋಕಾಸ್ ನೋಟಿಸ್ ಅನ್ನು ಯತ್ನಾಳ್ ಟ್ವೀಟ್ ಮಾಡಿದ್ದರು. ಆದರೆ ಈಗ ನೋಟಿಸ್‌ನ ಸತ್ಯಾಸತ್ಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ವಿಜಯೇಂದ್ರ ಕೆಲಸ ಇರಬಹುದು. ನನಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ರಿಜಿಸ್ಟ್ರರ್ಡ್ ಪೋಸ್ಟ್ ಮೂಲಕ ಬರಬೇಕು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬ್ಯಾಟ್ ಬೀಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕಾಮಗಾರಿಗೆ ಸಿಎಂ ಚಾಲನೆ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್ ಭಿಕ್ಷೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಯಾರು ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮನೆಗೆ ನಾನು ಹೋಗಿಲ್ಲ ಎಂದು ಮತ್ತೊಮ್ಮೆ ಹೇಳಿದರು.
ವಕ್ಫ್ ಬಗ್ಗೆ ದೊಡ್ಡ ಹೋರಾಟ ನಡೆಯಬೇಕು, ವಾಲ್ಮೀಕಿ ಹಗರಣ ನಡೆದಿದೆ. ಹಿಂದೂಗಳ ಸಮಸ್ಯೆ ಬಂದಾಗ ಅಧ್ಯಕ್ಷರು ಸಮಿತಿ ನೇಮಕ ಮಾಡುತ್ತಾರೆ. ಸರ್ಕಾರದ ವಿರುದ್ಧ ಯಾವುದೇ ಹೋರಾಟ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.