Friday, 21st September 2018

Recent News

ನಾನು ಐಶ್ವರ್ಯರನ್ನು ಮದುವೆ ಆಗಿಲ್ಲ- ಹುಚ್ಚ ವೆಂಕಟ್

ಬೆಂಗಳೂರು: ಸ್ಯಾಂಡಲ್‍ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಇತ್ತೀಚೆಗೆ ತಾವು ಮದುವೆಯಾಗಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆದರೆ ಈಗ ನಾನು ಮದುವೆ ಆಗಿಲ್ಲ ಅಂತಾ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ.

ಇತ್ತೀಚೆಗೆ ಹುಚ್ಚ ವೆಂಕಟ್ ‘ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದ ನಾಯಕಿ ಐಶ್ವರ್ಯ ಅವರನ್ನು ಮದುವೆಯಾಗಿದ್ದೇನೆ ಎಂದು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದರು, ಆದರೆ ಈಗ ನಾನು ಮತ್ತೊಂದು ಮದುವೆ ಆಗಿಲ್ಲ. ಅದು ಸುಳ್ಳು ಸುದ್ದಿ. ಐಶ್ವರ್ಯ ಅವರನ್ನು ಮದುವೆ ಆಗಿರುವುದು ಸಿನಿಮಾದಲ್ಲಿರುವ ದೃಶ್ಯ. ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದ್ದೇನೆ. ನಾನು ಯಾವತ್ತಿಗೂ ಒಬ್ಬನೇ, ನನಗೆ ಯಾರೂ ಬೇಕಾಗಿಲ್ಲ ಎಂದು ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಮದುವೆಯ ವಿಚಾರದ ಬಗ್ಗೆ ಐಶ್ವರ್ಯ ಈ ರೀತಿ ಮಾಡಲು ಹೇಳಿದ್ದರು. ಹಾಗಾಗಿ ನಾನು ಮದುವೆಯಾಗಿದ್ದೇನೆಂದು ವಿಡಿಯೋ ಮಾಡಿದೆ. ಆದರೆ ನನಗೆ ಈ ರೀತಿ ಮಾಡುವುದು ಇಷ್ಟವಿಲ್ಲ. ಅದಕ್ಕಾಗಿ ನಿಮ್ಮ ಮುಂದೆ ಎಲ್ಲವೂ ಹೇಳಿದ್ದೇನೆ ಎಂದು ಹುಚ್ಚ ವೆಂಕಟ್ ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಪ್ಲೀಸ್.. ನಮ್ಮಿಬ್ಬರನ್ನು ದೂರ ಮಾಡ್ಬೇಡಿ- ಎರಡನೇ ಮದ್ವೆಯಾಗಿ ಹುಚ್ಚ ವೆಂಕಟ್ ಮನವಿ

ನಾನು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದರು. ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹುಚ್ಚ ವೆಂಕಟ್ ತಮ್ಮ ಫೇಸ್‍ಬುಕ್ ಲೈವ್ ನಲ್ಲಿ ತಿಳಿಸಿದ್ದರು.

ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಹಾಗೂ ಆಕೆಯನ್ನು ತುಂಬ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಯಾರನ್ನು ಕೇಳಿ ಮದ್ವೆಯಾಗಿದ್ದಾನೆ: ಹುಚ್ಚ ವೆಂಕಟ್ ವಿರುದ್ಧ ಐಶ್ವರ್ಯ ತಾಯಿ ಗರಂ

Leave a Reply

Your email address will not be published. Required fields are marked *