ನಟ ನರೇಶ್ ಆತ್ಮೀಯರಾಗಿದ್ದು ದುಡ್ಡಿನ ಕಾರಣಕ್ಕೆ ಅಲ್ಲ, ನಾನು ದುಡ್ಡಿನ ಹಿಂದೆ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಹಿಂದೆ ಹೋಗಿದ್ದು ಕೇವಲ ದುಡ್ಡಿಗಾಗಿ ಎನ್ನುವ ಆಡಿಯೋವೊಂದು ಸಖತ್ ವೈರಲ್ ಆಗಿದೆ. ಈ ಮಾತುಗಳನ್ನು ಪವಿತ್ರಾ ಲೋಕೇಶ್ ಜೊತೆ 11 ವರ್ಷಗಳ ಕಾಲ ಬದುಕು ನಡೆಸಿರುವ ಸುಚೇಂದ್ರ ಪ್ರಸಾದ್ ಅವರೇ ಆಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ನಟಿ ಪವಿತ್ರಾ ಲೋಕೇಶ್ ಅವರನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೂ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ
ಸುಚೇಂದ್ರ ಪ್ರಸಾದ್ ಅವರು ಏನು ಮಾತನಾಡಿದ್ದಾರೆ ಅಂತ ನನಗಂತೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎನ್ನಲಾದ ಆಡಿಯೋದಲ್ಲಿ ನಾನು ದುಡ್ಡಿಗಾಗಿ ನರೇಶ್ ಅವರ ಜೊತೆ ಹೋಗಿದ್ದೇನೆ ಅಂತ ಅವರು ಹೇಳಿದ್ದರೆ, ನಾನು ಸುಚೇಂದ್ರ ಪ್ರಸಾದ್ ಅವರನ್ನು ಒಪ್ಪಿ ಹೋದಾಗ ಅವರ ಬಳಿ ಏನಿತ್ತು ಎನ್ನುವುದನ್ನು ಯೋಚಿಸಲಿ ಎಂದಿದ್ದಾರೆ ಪವಿತ್ರಾ ಲೋಕೇಶ್.

ಸುಚೇಂದ್ರ ಪ್ರಸಾದ್ ಅವರನ್ನು ಇಷ್ಟಪಟ್ಟು, ಅವರೊಂದಿಗೆ ಬದುಕಬೇಕು ಎಂದು ಹೋದಾಗ ಸುಚೇಂದ್ರ ಪ್ರಸಾದ್ ಬಳಿ ಏನೂ ಇರಲಿಲ್ಲ. ನಾನು ದುಡ್ಡಿನ ಹಿಂದೆ ಹೋದವಳು ಅಂತಾಗಿದ್ದಾರೆ, ನಾನು ಅವರೊಂದಿಗೆ ಹನ್ನೊಂದು ವರ್ಷ ಬದುಕುತ್ತಲೂ ಇರಲಿಲ್ಲ. ಸುಚೇಂದ್ರ ಪ್ರಸಾದ್ ತುಂಬಾ ಒಳ್ಳೆಯ ವ್ಯಕ್ತಿ. ತುಂಬಾ ಓದಿಕೊಂಡಿದ್ದಾರೆ. ಶಾಂತ ಸ್ವಭಾವದ ಮನುಷ್ಯ ಅನ್ನುವ ಕಾರಣಕ್ಕಾಗಿ ನಾನು ಅವರೊಂದಿಗೆ ಇದ್ದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಪವಿತ್ರಾ ಲೋಕೇಶ್.