ಇವತ್ತು ಇಡೀ ವಿಶ್ವ ಪ್ರಶಾಂತ್ ನೀಲ್ (Prashant Neel) ಕಡೆ ನೋಡುತ್ತಿದೆ. ಆದರೆ ಅದೇ ನೀಲ್ ಮೊದಲ ಸಿನಿಮಾ ಉಗ್ರಂ (Ugram) ಮಾಡುವಾಗ ಎಂಥಾ ಪರಿತಾಪ ಪಟ್ಟಿದ್ದರು ಅನ್ನೋದು ಆಲ್‌ಮೋಸ್ಟ್ ನಿಮ್ಮೆಲ್ಲರಿಗೂ ತಿಳಿದಿದೆ. ಉಗ್ರಂ ಸಿನಿಮಾವನ್ನ ಎಷ್ಟು ಪ್ರೀತಿಸಿದ್ದರು ಅನ್ನೋದಕ್ಕೆ ಸಾಕ್ಷಿ `ಸಲಾರ್’ ಚಿತ್ರ ಮಾಡಿರುವುದು. ಆ ನೆನಪು ಈಗ್ಯಾಕಂದ್ರೆ ಇದೀಗ ಉಗ್ರಂ ಚಿತ್ರಕ್ಕೆ ದಶಕದ ಸಂಭ್ರಮ. ಹೀಗಾಗೇ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಉಗ್ರಂ ಹಿಂದಿನ ಸಂಕಟದ ಕುರಿತು ಮನ ಬಿಚ್ಚಿದ್ದಾರೆ. ಅವರ ಮಾತುಗಳಲ್ಲೇ ಕೇಳಿ.
Advertisement
ಅರ್ಜುನ-ಶ್ರೀಕೃಷ್ಣ ಭಾವ ಬಾಮೈದ ಸೇರಿ ಕುರುಕ್ಷೇತ್ರ ಯುದ್ಧ ಗೆದ್ರು. ಹಾಗೆಯೇ ಭಾವ ಬಾಮೈದ ಪ್ರಶಾಂತ್ ನೀಲ್-ಶ್ರೀಮುರಳಿ ಉಗ್ರಂ ಚಿತ್ರಿಸಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ್ರು. ನಯಾ ತಂತ್ರಜ್ಞಾನವನ್ನ ಕನ್ನಡಕ್ಕೆ ಪರಿಚಿಯಿಸಿರುವ ಉಗ್ರಂ ಆ ಸಮಯದಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸಲಿಲ್ಲ. ಆದರೆ ಈಗದು ವಿಶ್ವವಿದ್ಯಾಲಯ. ಅದಕ್ಕೀಗ 10 ವರ್ಷ ಆಯಸ್ಸು ಪ್ಲಸ್ ಯಶಸ್ಸು.
Advertisement
Advertisement
ಪ್ರಶಾಂತ್ ನೀಲ್ ಈಗ ಸ್ಟಾರ್ ಡೈರೆಕ್ಟರ್. ಆದರೆ ಇದೇ ನೀಲ್ ಮೊದಲ ಹೆಜ್ಜೆಯಲ್ಲಿ ಅದೆಷ್ಟು ಸವಾಲು ಎದುರಿಸಿದ್ರು ಅನ್ನೋದು ಕೆಲವರಿಗೆ ಗೊತ್ತಿರಲಿಲ್ಲ. ಇಂದಿಗೂ ಉಗ್ರಂ ಬಿಗ್ಗೆಸ್ಟ್ ಟೀಚರ್ ಆಫರ್ ಮೈ ಲೈಫ್ ಎನ್ನುತ್ತಾರೆ ನೀಲ್. ತಾಳ್ಮೆ-ಹಠ-ಛಲ ಉಗ್ರಂ ಆಯ್ತು. ಶ್ರೀಮುರಳಿಗೆ (Muruli) ಗೆಲ್ಲಲೇಬೇಕಾದ ಅನಿವಾರ್ಯತೆ. ಪ್ರಶಾಂತ್ ನೀಲ್‌ಗೆ ಗೆಲ್ಲುವ ಹುಚ್ಚು. ಆಗ ಸೃಷ್ಟಿಯಾಗಿದ್ದೇ ಉಗ್ರಂ.
Advertisement
ನೀಲ್-ಭುವನ್ ಗೌಡ-ರವಿಬಸ್ರೂರ್ ಹಸಿದ ಜೀವಗಳಾಗಿದ್ವು. ಸಾಧಿಸುವ ವಿಶ್ವಾಸ. ಸಾಧಿಸಬೇಕೆಂಬ ಹಂಬಲ. ಹೀಗಾಗಿ ಹುಚ್ಚುತನದಿಂದ ಹೋಗ್ತಿದ್ದ ತಂಡಕ್ಕೆ ಹುಚ್ಚರೇ ಬೇಕಿತ್ತು. ಅದೇ ನಾವು ಎನ್ನುತ್ತಾರೆ ನೀಲ್. ಪ್ರಶಾಂತ್ ನೀಲ್ ಸಹೋದರಿಯನ್ನ ಶ್ರೀಮುರಳಿ ಮದುವೆಯಾಗಿದ್ದಾರೆ. ಅದಕ್ಕೆ ತಮಾಷೆಯಿಂದ, `ವರದಕ್ಷಿಣಿ ಕೊಟ್ಟಿರಲಿಲ್ಲ. ಹೀಗಾಗಿ ಸಿನಿಮಾ ಮಾಡ್ಕೊಟ್ಟೆ’ ಎನ್ನುತ್ತಾರೆ ನೀಲ್.
ಉಗ್ರಂ ಚಿತ್ರವನ್ನ ನೀಲ್ ಎಷ್ಟು ಪ್ರೀತಿಸಿದ್ದರು ಅಂದ್ರೆ ಅದನ್ನೇ ದೊಡ್ಡ ಮಟ್ಟಕ್ಕೆ ತಲುಪಿಸಲು ಸಲಾರ್ ಸಿನಿಮಾ ಮಾಡಿದ್ರು. ಉಗ್ರಂ ಮಾಡುವಾಗ ಪ್ರತಿ ಹಂತದಲ್ಲೂ ಸವಾಲು ಎದುರಿಸಿದ್ದಕ್ಕೆ ಈಗ ನೀಲ್ ಬಂಡೆಯಾಗಿದ್ದಾರೆ. ಸಿಡಿಲಿಗೂ ಬೆಚ್ಚದೆ ಉಕ್ಕಿನಂತೆ ನಿಂತಿದ್ದಾರೆ. ಮಾಡಿದ್ದು ನಾಲ್ಕೇ ಸಿನಿಮಾ ಆದ್ರೂ ಇಂಡಿಯನ್ ಸಿನಿಮಾ ಇಂಡಸ್ಟಿçಯಲ್ಲಿ ನೀಲ್ ಟ್ರೆಂಡ್ ಸೆಟ್ಟರ್. ಹೀಗಾಗಿ ಉಗ್ರಂ ಮೆಲಕು ಹಾಕಿದ್ದಾರೆ ನೀಲ್ & ಶ್ರೀಮುರಳಿ. ಕಾಲ ಯಾರನ್ನು ಎಲ್ಲಿ ಬೇಕಾದರೂ ಕೂಡಿಸುತ್ತದೆ. ಕಾಯಬೇಕಷ್ಟೇ.