ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬರುತ್ತಿವೆ. ಈ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಅವರನ್ನು ಕೈ ಬಿಡುತ್ತಿದ್ದಂತೆಯೇ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಸಡನ್ನಾಗಿ ಕನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು ಕೇಳಿ ಬಂದಿತ್ತು. ಎಂದೂ ನಟನೆಯನ್ನೇ ಮಾಡದ ಅನೂಪ್ ಗೆ ಇಂಥದ್ದೊಂದು ಆಫರ್ ಹೋಗಿದ್ದು ನಿಜವಾ ಎನ್ನುವ ಅನುಮಾನ ಕೂಡ ಮೂಡಿತ್ತು.
Advertisement
ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದಿರುವ ಅನೂಪ್, ಈ ಪಾತ್ರವನ್ನು ಒಪ್ಪಿಕೊಂಡು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅನೂಪ್ ಮುಖ, ಗಡ್ಡ, ಅವರ ಲುಕ್ ಥೇಟ್ ಅನಿರುದ್ಧ ರೀತಿಯಲ್ಲೇ ಕಾಣುವುದರಿಂದ ಧಾರಾವಾಹಿ ತಂಡವು ಅನೂಪ್ ಅವರನ್ನು ಸಂಪರ್ಕಿಸಬಹುದು ಎಂದೂ ಹೇಳಲಾಗಿತ್ತು. ಈಗ ಅದೆಲ್ಲವೂ ನಿಜವಾಗಿದೆ. ಧಾರಾವಾಹಿ ತಂಡ ತಮ್ಮನ್ನು ಸಂಪರ್ಕಿಸುವ ವಿಚಾರವನ್ನು ಅನೂಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ
Advertisement
Advertisement
ಜೊತೆ ಜೊತೆಯಲಿ ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆ ಆಫರ್ ಅನ್ನು ನಿರಾಕರಿಸಿದೆ. ಈಗಾಗಲೇ ಹೊಸ ಸಿನಿಮಾ ಮಾಡುವ ತಯಾರಿ ನಡೆಸಿದ್ದೇನೆ. ಇಂತಹ ವೇಳೆಯಲ್ಲಿ ನಾನು ಧಾರಾವಾಹಿ ಒಪ್ಪಿಕೊಂಡರೆ, ನನ್ನ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾರೆ ಅನೂಪ್ ಭಂಡಾರಿ.