ಬೆಂಗಳೂರು: ನಾನು ಏನೂ ತಪ್ಪು ಮಾಡಿಲ್ಲ. ನನ್ನ ತಲೆದಂಡದ ಪ್ರಶ್ನೆ ಬರಲ್ಲ ಎಂದು ಸಚಿವ ತಿಮ್ಮಾಪುರ್ (R.B.Timmapur) ಹೇಳಿದ್ದಾರೆ.
ಅಬಕಾರಿ ಇಲಾಖೆ (Excise Department) ಮೇಲೆ ಭ್ರಷ್ಟಾಚಾರ ಆರೋಪದ ವಿಚಾರ ಮತ್ತು ಮಂಡ್ಯದಲ್ಲಿ ಅಬಕಾರಿ ಇಲಾಖೆ ಅಕ್ರಮದ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅಬಕಾರಿ ಇಲಾಖೆ ಆಡಿಯೋ ವಿಚಾರದಲ್ಲಿ ಜೆಸಿಯಿಂದ ವರದಿ ಪಡೆದಿದ್ದೇನೆ. ಆ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಇಲಾಖೆ ಮೇಲೆ ಲಂಚದ ಆರೋಪ ಬಂದಿರೋ ವಿಚಾರವಾಗಿ ವರದಿ ತರಿಸಿಕೊಳ್ಳೋಣ ಎಂದು ತಿಳಿಸಿದರು. ಇದನ್ನೂ ಓದಿ: ತಾಯಿ ಮನೆ ಬಿಜೆಪಿಗೆ ಈಶ್ವರಪ್ಪ ಬೇಗ ವಾಪಸಾಗಬೇಕು: ಕಾಶಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
Advertisement
Advertisement
ಅಬಕಾರಿ ಇಲಾಖೆ ಮೇಲೆ ಆಗಾಗ ಇಂತಹ ಆರೋಪ ಕೇಳಿ ಬರುತ್ತದೆ. ಇಲಾಖೆಯಲ್ಲಿ ಕೆಲವು ವಿಚಾರಗಳನ್ನು ಸರಿ ಮಾಡಬೇಕು. ಅದನ್ನು ಮಾಡುತ್ತೇನೆ. ನನ್ನ ತಲೆದಂಡದ ಪ್ರಶ್ನೆ ಬರಲ್ಲ. ತಿಮ್ಮಾಪುರ್ ಏನು ತಪ್ಪು ಮಾಡಿಲ್ಲ. ಏನಾದರೂ ಇದ್ದರೆ ನಾನು ಅದನ್ನು ಎದುರಿಸುತ್ತೇನೆ. ಹಿಂದೆಯೂ ಅಬಕಾರಿ ಮಂತ್ರಿ ಆಗಿದ್ದವರ ಮೇಲೆ ಇಂತಹ ಆರೋಪಗಳು ಬಂದಿದೆ. ಎಲ್ಲಾ ಮಂತ್ರಿಗಳ ಮೇಲೂ ಆರೋಪ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಪಕ್ಷದಲ್ಲಿ ಎರೆಹುಳುಗಳು ನಾಗರಹಾವುಗಳಾಗುತ್ತಿದ್ದಾರೆ: ಡಿವಿಎಸ್ ಕಿಡಿ
Advertisement
Advertisement
ಇಲಾಖೆಯಲ್ಲಿ ಕೆಲವು ಬದಲಾವಣೆ ಆಗಬೇಕು. ಅದನ್ನು ಮಾಡುತ್ತೇನೆ. ಮೋದಿಯವರು 700 ಕೋಟಿ ಅಕ್ರಮದ ಆರೋಪ ಮಾಡುತ್ತಾರೆ. ಇದಕ್ಕೆ ಬೆಲೆ ಇದೆ. ಅಧಿಕಾರಿಗಳ ಹಂತದಲ್ಲಿ ಇವೆಲ್ಲ ನಡೆಯುತ್ತಿದೆ. ಇದನ್ನು ಸರಿ ಮಾಡುತ್ತೇನೆ. ಇಲಾಖೆಯ ವರ್ಗಾವಣೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವ ಪ್ರಕ್ರಿಯೆ ತರುತ್ತೇವೆ. ಮದ್ಯದಂಗಡಿಗಳಿಗೆ ಅನುಮತಿ ನೀಡುವ ವಿಚಾರವಾಗಿಯೂ ಕೆಲವು ಗೊಂದಲ ಆಗುತ್ತಿದೆ. ಇವೆಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಕಾರವಾರ| ವಿದ್ಯುತ್ ಶಾಕ್‌ನಿಂದ ವಿದ್ಯಾರ್ಥಿನಿ ಸಾವು