ಧಾರವಾಡ: ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬೇಸರ ಹೊರಹಾಕಿದ ಬಳಿಕವೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಜಿಲ್ಲೆಯ ಅಣ್ಣಿಗೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ದೇವೇಗೌಡರ ಕುಟುಂಬ ಸದಸ್ಯರು, ನೆಂಟರು ಎಲ್ಲರೂ ರಾಜಕೀಯದಲ್ಲಿದ್ದಾರೆ. ಇದು ಸಂತುಷ್ಟ ಕುಟುಂಬ ಆಗಬೇಕಾದರೆ ಚನ್ನಮ್ಮರನ್ನು ರಾಜ್ಯಸಭಾ ಸದಸ್ಯರನ್ನಾಗಿಸಬೇಕು ಎಂದು ಸಲಹೆ ಕೊಟ್ಟಿದೆ. ನಾನು ಹೀಗೆ ಹೇಳಿದ್ದು ನೋವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ. ಆದರೆ ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಯಾಕಂದ್ರೆ ನೀವು ಮುಖ್ಯಮಂತ್ರಿ, ನಿಮ್ಮ ಸಹೋದರ ಸಚಿವ ಇರೋವಾಗ ಮಕ್ಕಳನ್ನು ಸಂಸದರನ್ನಾಗಿ ಮಾಡೋಕೆ ಹೊರಟಿದ್ದೀರಿ. ಹೀಗಿರುವಾಗ ಚನ್ನಮ್ಮಾಜಿಯವರನ್ನು ರಾಜ್ಯಸಭಾ ಸದಸ್ಯರನ್ನು ಮಾಡುವಲ್ಲಿ ತಪ್ಪೇನಿದೆ. ಅದನ್ನು ಬೇರೆ ರೀತಿ ಅಪಾರ್ಥ ಮಾಡಿಕೊಳ್ಳೋದು ಬೇಡ ಎಂದು ಹೇಳಿದರು. ಇದನ್ನೂ ಓದಿ: ಜಗದೀಶ್ ಶೆಟ್ಟರ್ ಹೇಳಿಕೆ ನನಗೆ ನೋವುಂಟು ಮಾಡಿದೆ – ಎಚ್‍ಡಿಕೆ
Advertisement
ನೋವು ಆಗುವ ರೀತಿಯಲ್ಲಿ ನಾನು ಹೇಳಿಲ್ಲ. ಒಳ್ಳೆ ರೀತಿಯಲ್ಲಿ ನನ್ನ ಹೇಳಿಕೆಯನ್ನು ತೆಗೆದುಕೊಳ್ಳಿ. ನಿಮ್ಮನ್ನು ಸಾಕಿ ಸಲಹಿದ ಅವರು ಕೂಡ ರಾಜ್ಯಸಭಾ ಮೆಂಬರ್ ಆಗ್ಲಿ ಎಂದು ಹೇಳಿದ್ದೇನೆ. ನಿಖಿಲ್, ಪ್ರಜ್ವಲ್ ಮನೆಗೆ ಹೋಗುತ್ತಾರೆ. ನಿಖಿಲ್ ಎಲ್ಲಿದ್ದೀಯಪ್ಪ ಎಂದು ಹುಡುಕಬೇಕಾಗುತ್ತದೆ. ನಾನು ಹಾಸಿಗೆ ಹಿಡಿಯುವವರೆಗೂ ರಾಜಕೀಯ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಕೇಳಿದ್ರೆ, ಇವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ರು.