ಹಾಸನ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು. ಟಮ ಟಮ ಅಂದ್ರೆ ಏನು ಅಂಥ ಅಶ್ವಥ್ ನಾರಾಯಣಗೆ, ಬಿಜೆಪಿ ಪಕ್ಷಕ್ಕೆ ಈ ನಾಡಿನ ಜನ ತೋರುಸ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ಜಿಟ್ಟೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ವಿಧಾನಸಭೆಯಲ್ಲಿ ಯಾವ ರೀತಿ ಮಾತನಾಡಬೇಕು ಎಂದು ಇವರಿಂದ ಕಲಿಯಬೇಕಿಲ್ಲ. ವಿಧಾನಸೌಧಕ್ಕೆ ನಾನು ಬಂದಾಗ ಯಾವ ರೀತಿ ಸದನ ನಡೆಯುತ್ತಿತ್ತು. ನೀವು ಯಾವ ರೀತಿ ಸದನದ ಕಲಾಪಗಳನ್ನು ಹಾಳು ಮಾಡಿದ್ರಿ ಇದನ್ನೆಲ್ಲ ಗಮನಿಸಿದ್ದೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ತನ್ನ ಮಿತ್ರಪಕ್ಷಗಳನ್ನು ಮುಗಿಸಲು ಪ್ರಯತ್ನಿಸುತ್ತಿದೆ, ನಿತೀಶ್‍ರದ್ದು ಒಳ್ಳೆಯ ನಿರ್ಧಾರ: ಶರದ್ ಪವಾರ್
Advertisement
Advertisement
ಸದನಕ್ಕೆ ನಾವು ಬರೋದು ಟಿಎ ಡಿಎ ಬಿಲ್ ತಗೊಳಲು ಅಲ್ಲ. ವಿಷಯಗಳನ್ನು ಪ್ರಸ್ತಾಪ ಮಾಡಲು. ನಾನು ಎರಡು, ಮೂರು ವಿಷಯಗಳನ್ನು ಪ್ರಸ್ತಾಪ ಮಾಡಿದಾಗ ನಿಮ್ಮ ಅಧ್ಯಕ್ಷರು ಏನು ಪ್ರತಿಕ್ರಿಯೆ ಕೊಟ್ಟಿದ್ದಾರೆ ಅನ್ನೋದು ಕಡತದಲ್ಲಿ ಇದೆ. ಅದನ್ನ ತೆಗೆದು ನೋಡಪ್ಪ ಎಂದು ಟೀಕಿಸಿದರು.
Advertisement
ನಿನ್ನಿಂದ ನಾನು ಕಲಿಯಬೇಕಿಲ್ಲ. ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ. ನಿನ್ನ ಪಟಾಲಂ ಇಟ್ಕಂಡು, ಎಲ್ಲಿ ತನಿಖೆ ಆಗುತ್ತೆ ಅಂಥ ಕಡತಗಳನ್ನು ಕಾರ್ಪೊರೇಷನ್ ಆಫೀಸ್ ತಂದು ಸುಡುವ ಕೆಲಸ ಮಾಡಿದ್ದಿಯಾ. ಲಾಟರಿ ದಂಧೆ ಮಾಡರೋ, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡ್ಸೋರು, ಬೆಂಗಳೂರನ್ನು ಲೂಟಿ ಹೊಡೆಯುವವರ ಜೊತೆ ಸೇರಿ ಸರ್ಕಾರ ತೆಗೆಯಲು ಏನೇನ್ ನಡ್ಸಿದ್ದೀಯಾ ನನಗೆ ಗೊತ್ತಿಲ್ವಾ ಎಂದು ಎಚ್ಚರಿಸಿದರು.
Advertisement
ನಿನ್ನಿಂದ ನಾನು ಕಲಿಯಬೇಕಾ, ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಲೂಟಿ ಹೊಡ್ಕಂಡು ರಾಜ್ಯ ಹಾಳು ಮಾಡುತ್ತಿದ್ದೀರಿ. ನನ್ನ ನಡವಳಿಕೆ, ವಿಧಾನಸಭೆಯಲ್ಲಿ ನನ್ನ ಪರ್ಫಾರ್ಮೆನ್ಸ್ ಬಗ್ಗೆ ಚರ್ಚೆ ಮಾಡುವ ಯೋಗ್ಯತೆ ನಿನಗೆ ಎಲ್ಲಿದೆ. ನನ್ನ ಬಗ್ಗೆ ಚರ್ಚೆ ಮಾಡಬೇಕಾದರೆ ನಾಲಿಗೆ ಮೇಲೆ ಹಿಡಿತವಿರಲಿ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಏನು ಅಂಥ ತೋರುಸ್ತೀವಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ‘ಗಾಂಧಿಜೀಯನ್ನು ಕೊಂದಿದ್ದು ನಾವೇ’ ಎಂದ ಹಿಂದೂ ಮಹಾಸಭಾದ ಅಧ್ಯಕ್ಷನ ವಿರುದ್ಧ ಕಾಂಗ್ರೆಸ್ ದೂರು
ಜೆಡಿಎಸ್ ಪಕ್ಷ ಏನು ಅನ್ನೋದು ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತೆ. ಜನ ತೋರುಸ್ತಾರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎಲ್ಲಿ ಇರುತ್ತೆ ಅನ್ನೋದನ್ನ ಕಾದು ನೋಡಿ. ದುಡ್ಡಿನ ಮದದಲ್ಲಿ ಮಾತನಾಡುವ ಅಶ್ವತ್ ನಾರಾಯಣಗೆ ಹೇಳ್ತಿನಿ, ಮುಂದಕ್ಕೆ ಇದಕ್ಕೆಲ್ಲ ಪ್ರಾಯಶ್ಚಿತ್ತ ಅನುಭವಿಸುವ ಕಾಲ ಬರುತ್ತೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.