ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಸಂಪತ್‌ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆತ ಯಾವುದೇ ಪಕ್ಷದವನಾಗಿರಲಿ. ಆದರೆ ತಾನು ಪಾಲಿಸುವ ಧರ್ಮಕ್ಕೆ ಅಪಮಾನ ಮಾಡಿದಾಗ ಆತ ಸರಿಯಾದ ಪ್ರತಿಕ್ರಿಯೆ ನಿಡಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಮೊಟ್ಟೆ ಎಸೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೂ ಧರ್ಮದ ಅಪಮಾನ ಮಾಡಿರುವುದಕ್ಕೆ ಆತನಿಗೆ ನೋವಾಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷದವನಾಗಿರಲಿ. ಸರಿಯಾದ ಪ್ರತಿಕ್ರಿಯೆ ಕೊಟ್ಟಿದ್ದಾನೆ. ಇದೇ ರೀತಿಯಲ್ಲಿ ಧರ್ಮ ಜಾಗೃತಿ ಆಗಬೇಕು ಎಂದರು. ಇದನ್ನೂ ಓದಿ: ಪಕ್ಷ ಸೇರಿದರೆ ಪ್ರಕರಣ ಖುಲಾಸೆ – ಬಿಜೆಪಿಯಿಂದ ಆಫರ್ ಬಂದಿತ್ತು ಎಂದ ಸಿಸೋಡಿಯಾ
ನಾನು ಯಾವುದೇ ಧರ್ಮದ ಅಪಮಾನ ಮಾಡಿ ಎಂದು ಹೇಳುವುದಿಲ್ಲ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಕ್ಕೂ ನಾನು ಗೌರವ ಕೊಡುತ್ತೇನೆ. ಆದರೆ ಯಾವುದೇ ಧರ್ಮಕ್ಕೆ ಹೀಯಾಳಿಸುವುದು, ಅತಿ ಹೀನವಾಗಿ ಮಾತನಾಡುವುದು ಸರಿಯಲ್ಲ. ಆತ ಇದರಿಂದಲೇ ಆಕ್ರೋಶಗೊಂಡು ಈ ಕೆಲಸ ಮಾಡಿದ್ದಾನೆ ಎಂದು ಆತನ ಕೃತ್ಯವನ್ನು ಸಮರ್ಥಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಾಂಸದೂಟ ಮಾಡಿಯೇ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದು: ಮಾಜಿ ಮೇಯರ್ ರವಿಕುಮಾರ್