ಬೆಂಗಳೂರು: ಚಾಮರಾಜನಗರಕ್ಕೆ (Chamarajanagara) ಅಭ್ಯರ್ಥಿ ಆಗುವ ಬಗ್ಗೆ ಈಗಾಗಲೇ ನನ್ನ ನಿರ್ಧಾರ ಸ್ಪಷ್ಟವಾಗಿ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎನ್ನುವ ಮೂಲಕ ಲೋಕಸಭೆಗೆ ನಾನು ಸ್ಪರ್ಧೆ ಮಾಡೊಲ್ಲ ಅಂತ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ಪರೋಕ್ಷವಾಗಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ಬಳಿಕ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಕಾರ್ಯಕ್ರಮ, ಸಭೆಗಳನ್ನ ಫಿಕ್ಸ್ ಮಾಡೋ ಬಗ್ಗೆ ಚರ್ಚೆ ಆಗಿದೆ. ನಾನು, ವೆಂಕಟೇಶ್, ಕೊಳ್ಳೇಗಾಲ ಶಾಸಕ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಲೋಕಸಭೆ ಟಿಕೆಟ್ ವಿಚಾರ ಅಲ್ಲಿ ಚರ್ಚೆ ಆಗಿಲ್ಲ. ಚಾಮರಾಜನಗರಕ್ಕೆ ಯಾರು ಅಭ್ಯರ್ಥಿ ಅಂತ ಹೈಕಮಾಂಡ್ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಹೇಳಿದ್ದೇ ಅಂತಿಮವಾಗುತ್ತದೆ. ಚುನಾವಣೆ ಕೆಲಸಗಳ ಬಗ್ಗೆ ಚರ್ಚೆ ಮಾಡೋಕೆ ಸಭೆ ಮಾಡಿದ್ವಿ ಅಂತ ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ
Advertisement
Advertisement
ಚಾಮರಾಜನಗರ ಟಿಕೆಟ್ ನೀಡುವ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಕಾಂಗ್ರೆಸ್‌ಗೆ ಟಿಕೆಟ್ ಘೋಷಣೆ ಆಗುತ್ತದೆ ಅಂದ್ರು. ಮಹಾದೇವಪ್ಪ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿನಿಂದಲೂ ನನ್ನ ಹೆಸರು ಕೇಳಿ ಬರ್ತಿದೆ. ನನ್ನ ನಿರ್ಧಾರ ಏನು ಅಂತ ಹೈಕಮಾಂಡ್‌ಗೆ ಈಗಾಗಲೇ ಹೇಳಿದ್ದೇನೆ. ಅಭ್ಯರ್ಥಿ ಯಾರು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದಕ್ಕೆ ನಾವು ಕೆಲಸ ಮಾಡ್ತೀವಿ. ನಮ್ಮ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು. ಇದು ನನ್ನ ಕೆಲಸ ಅದನ್ನ ಮಾಡ್ತೀವಿ. ಎಲ್ಲರಿಗೂ ನನ್ನ ಮೇಲೆ ಪ್ರೀತಿ ಇದೆ. ನಾವೆಲ್ಲರು ಒಟ್ಟಾಗಿ ಕೆಲಸ ಮಾಡಿ ಮೈಸೂರು, ಚಾಮರಾಜನಗರ ಗೆಲ್ಲೋಕೆ ಪ್ರಯತ್ನ ಮಾಡೋಣ ಅಂತ ಟಿಕೆಟ್ ನಿರಾಕರಿಸಿದರು.
Advertisement
Advertisement
ಬೇರೆ ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟು ನಿಮ್ಮ ಮಗನಿಗೆ ಟಿಕೆಟ್‌ಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಮಕ್ಕಳಿಗೆ ಟಿಕೆಟ್ ಕೊಡಬೇಕು ಅಂತ ಮ್ಯಾಂಡೇಟ್ ಇಲ್ಲ. ಅದೇನು ರೈಟ್ಸ್ ಅಲ್ಲ. ಸ್ಥಳೀಯ ಸನ್ನಿವೇಶ ನೋಡಿಕೊಂಡು ತೀರ್ಮಾನ ಮಾಡ್ತೀವಿ. ಲೋಕಲ್ ಪರಿಸ್ಥಿತಿ ನೋಡಿ ಅವಲೋಕನ ಮಾಡಿ CEC ಅಂತಿಮವಾಗಿ ನಿರ್ಧಾರ ಮಾಡುತ್ತೆ. ನಮ್ಮ ನಾಯಕರು, ಪಕ್ಷದವರಿಗೆ ನಾನು ನಿಲ್ಲಬೇಕು ಅಂತ ಪ್ರೀತಿ ಇದೆ. ಅ ಪ್ರೀತಿಯನ್ನ ಕ್ಷೇತ್ರ ಗೆಲ್ಲಿಸಿಕೊಡುವ ಮೂಲಕ ತೀರಿಸ್ತೀನಿ. ಇವತ್ತು ನಾಳೆ, ಟಿಕೆಟ್ ಘೋಷಣೆ ಆಗುತ್ತದೆ. ನನ್ನ ನಿಲುವು ಪಕ್ಷದ ನಿಲುವು. ಪಕ್ಷದ ಕೆಲಸ ನನ್ನ ನಿಲುವು. ಯಾರೇ ಟಿಕೆಟ್ ಕೊಟ್ಟರು ಕೆಲಸ ಮಾಡ್ತೀವಿ. ನನ್ನ ನಿಲುವು ಈಗಾಗಲೇ ಹೈಕಮಾಂಡ್ ಹೇಳಿದ್ದೇವೆ. ಪಾರ್ಟಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು. ಇದನ್ನೂ ಓದಿ: ಚುನಾವಣೆಗೆ ಹಂಚೋದಕ್ಕೆ 8 ಲಕ್ಷ ಕುಕ್ಕರ್ ಇಟ್ಟಿದ್ದಾರೆ, ದುಡ್ಡು ಕೊಡ್ತಿದ್ದಾರೆ: ಮುನಿರತ್ನ ಗಂಭೀರ ಆರೋಪ