ಬೆಂಗಳೂರು: ನಿನ್ನನ್ನು ನೋಡಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಕಿರುತೆರೆ ನಟಿ ಶ್ವೇತಾ ಚಂಗಪ್ಪ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಶ್ವೇತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಾನು ನಿನ್ನ ತಾಯಿ ಆಗುವುದ್ದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನ ತಂದೆ ನಿನ್ನನ್ನು ಹಿಡಿದುಕೊಂಡು ಇರುವುದನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ದೊಡ್ಡ ಕುಟುಂಬದ ಜೊತೆ ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಿಸಿ ‘ಅಮ್ಮ’ ಎಂದು ಕರೆಸಿಕೊಳ್ಳಲು ಕಾಯುವುದ್ದಕ್ಕೆ ಆಗುತ್ತಿಲ್ಲ. ನಾನು ಹಾಗೂ ನಿನ್ನ ತಂದೆ ನಿನಗೆ ಜಗತ್ತಿನ ಎಲ್ಲ ಪ್ರೀತಿಯನ್ನು ತೋರಿಸಲು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಸಭ್ಯ ಕಮೆಂಟ್ – ಅಭಿಮಾನಿಗೆ ಶ್ವೇತಾ ಚಂಗಪ್ಪ ಫುಲ್ ಕ್ಲಾಸ್
Advertisement
Advertisement
ಶ್ವೇತಾ ಚಂಗಪ್ಪ ಅವರು ತಮ್ಮ ಪತಿಯ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್ನ ಫೋಟೋ ಶೂಟ್ ಮಾಡಿಸಿದ್ದರು.
Advertisement
ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ `ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, `ಯಾರಿಗುಂಟು ಯಾರಿಗಿಲ್ಲ’ ಎಂಬ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಆದರೆ ಇವರು ಮಜಾ ಟಾಕೀಸ್ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ರಾಣಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.