ತುಮಕೂರು: ಜಿಲ್ಲೆಯ ತಿಲಕ್ ಪಾರ್ಕ್ ಬಳಿ ನಡೆಯುತ್ತಿದ್ದ ರೌಡಿಗಳ ಪರೇಡ್ನಲ್ಲಿ ಮಹಿಳಾ ಸಿಪಿಐಯೊಬ್ಬರು ‘ಲೇಡಿ ಸಿಂಗಂ’ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಯಾವ ಕೇಸಲ್ಲಿ ಬೇಕಾದರು ಫಿಟ್ ಮಾಡುತ್ತೇನೆ ಎಂದು ರೌಡಿಶೀಟರ್ಗಳಿಗೆ ಧಮ್ಕಿ ಹಾಕಿದ್ದಾರೆ.
ಸಿಪಿಐ ಪಾರ್ವತಮ್ಮ ಲೇಡಿ ಸಿಂಗಂ ಆಗಲು ಹೋಗಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. “ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು, ಮಕ್ಕಳಾ ಮುಚ್ಚಿಕೊಂಡಿರಿ. ಅನ್ನ ತಿನ್ನಲು ಗತಿಯಿಲ್ಲ, ನೆಟ್ಟಗೆ ಬಟ್ಟೆ ಹಾಕೋ ಗತಿಯಿಲ್ಲ ನಿಮಗೆ” ಎಂದು ಹೀನಾಮಾನವಾಗಿ ರೌಡಿಶೀಟರ್ಗಳಿಗೆ ಬೈದಿದ್ದಾರೆ. ಜೊತೆಗೆ ಚನ್ನಪ್ಪನ ಪಾಳ್ಯದ ಹೆಣ್ಣು ಮಕ್ಕಳು ಬಾರಿ ಆಟ ಆಡ್ತಾರೆ, ಅವರಿಗೆ ಹೇಳಿ ಎಂದು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ.
ರೌಡಿಶೀಟರ್ಗಳಿಗೆ , “ಮಗನೇ ಬೀದಿ ಹೆಣ ಆಗ್ತೀಯಾ, ಮದುವೆ ಮಾಡ್ಕೊಬೇಡ. ನನ್ಮಕ್ಕಳಾ ರೌಡಿಶೀಟರ್ ಗೆ ನಾನು ಏನ್ ಬೇಕಾದರೂ ಮಾಡಬಹುದು. ಯಾರ ಪರ್ಮಿಷನ್ನು ಬೇಕಾಗಿಲ್ಲ. ಯಾರಿಗೂ ಕೇಳಬೇಕಾಗಿಲ್ಲ. ನೀವು ಸಾಯೋ ತನಕನೂ ನಾವು ನಿಮ್ಮನ್ನ ಯಾವ ಕೇಸಲ್ಲಿ ಬೇಕಾದರೂ ಫಿಟ್ ಮಾಡಬಹುದು” ಎಂದು ಸಿಪಿಐ ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ.
ಅಲ್ಲದೆ ಇವರಿಗೆಲ್ಲಾ ಚೆನ್ನಾಗಿ ವರ್ಕ್ ಮಾಡಿ, ಮದುವೆ ಮಾಡಿಕೊಂಡು ಹೆಂಡತಿ ಮಾಡ್ಕೊಂದರೆ ಅವಳು ಬೇರೆಯವರ ಪಾಲಾಗುತ್ತಾಳೆ ಎಂದು ಸಭ್ಯತೆ ಮೀರಿ ಪಾರ್ವತಮ್ಮ ಮಾತನಾಡಿದ್ದಾರೆ. ಜವಾಬ್ದಾರಿಯುತ ಕೆಲಸದಲ್ಲಿರುವ ಅಧಿಕಾರಿ ಈ ರೀತಿ ವರ್ತಿಸಿರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.