ಪಕ್ಷದ ಪರವಲ್ಲ, ವ್ಯಕ್ತಿ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ನಟ ದರ್ಶನ್

Public TV
1 Min Read
Darshan 10

ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ (Campaign) ಮಾಡುವುದಿಲ್ಲ. ವ್ಯಕ್ತಿಯ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಅವರಿಗೆ ಮತ ಹಾಕಿ ಎಂದು ನಟ ದರ್ಶನ್ (Darshan) ಹೇಳಿದರು. ಬೆಳಗ್ಗೆಯಿಂದ ಮಂಡ್ಯ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಮತಯಾಚನೆ ಮಾಡುತ್ತಿದ್ದಾರೆ ದರ್ಶನ್.

Darshan 9

ಹಲಗೂರಿನಲ್ಲಿ ಮಾತನಾಡಿದ ದರ್ಶನ್, ನಾನು ಯಾವುದೇ ಪಕ್ಷದ ಪರವಾಗಿ ಬರಲ್ಲ. ನಾನು ಬರೋದು ವ್ಯಕ್ತಿ ಪರವಾಗಿ. ಐದು ವರ್ಷದ ಹಿಂದೆ ನರೇಂದ್ರಸ್ವಾಮಿ ಸಹಾಯ ಮರೆಯಲ್ಲ. ಮೊದಲೇ ಶಾಸಕ ಉದಯ್ ಹೇಳಿದ್ರು ಸುಮಮ್ಮನಿಗೆ ಟಿಕೆಟ್ ಆಗಲಿಲ್ಲ. ಆದ್ರೆ ನಮಗೆ ಮಾಡಿ ಅಂದಿದ್ರು. ಮೊದಲು ಅವರು ಕೇಳಿದ ಕಾರಣ ನಾನು ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಎಲ್ಲರೂ ಮತ ಹಾಕಿ ಎಂದಿದ್ದಾರೆ.

 

ಹಲಗೂರು ಗ್ರಾಮಕ್ಕೆ ದರ್ಶನ್ ಬರುತ್ತಿದ್ದಂತೆಯೇ ಅಭಿಮಾನಿಗಳಿಂದ ಜೈಕಾರ ಕೇಳಿ ಬಂತು. ಡಿ ಬಾಸ್ ಡಿ ಬಾಸ್ ಘೋಷಣೆ ಮೊಳಗಿಸಿ ಸಂಭ್ರಮಿಸಿದ್ದಾರೆ ಅಭಿಮಾನಿಗಳು. ಬೃಹತ್ ಗುಲಾಬಿ ಹೂವಿನ ಹಾರ ಸಮರ್ಪಣೆ ಕೂಡ ಮಾಡಿದ್ದಾರೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ನೆಚ್ಚಿನ ನಟನಿಗೆ ಸ್ವಾಗತ ನೀಡಿದ್ದಾರೆ.

Share This Article