ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ- ಆಂಡ್ರ್ಯೂಗೆ ಕಿಚ್ಚ ತರಾಟೆ

Public TV
2 Min Read
sudeep andrew collage

ಬೆಂಗಳೂರು: ಕನ್ನಡದ ಅತಿ ಜನಪ್ರಿಯ ಶೋ ‘ಬಿಗ್ ಬಾಸ್’ ಸೀಸನ್- 6ನಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿ ಆಂಡ್ರ್ಯೂನೊಂದಿಗೆ ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ ಅಂತ ಹೇಳುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮೊದಲು ಕಿಚ್ಚ ಸುದೀಪ್, ಅವಾಚ್ಯ ಪದಗಳನ್ನು ಬಳಸಬೇಡಿ. ಮಾತಿನ ಮೇಲೆ ಹಿಡಿತ ಇರಲಿ ಹಾಗೂ ಚಿಕ್ಕ ವಿಷಯಕ್ಕೆ ಜಗಳವಾಡಬೇಡಿ ಎಂದು ಆಂಡ್ರ್ಯೂ ಹಾಗೂ ಇತರ ಸ್ಪರ್ಧಿಗಳಿಗೆ ಬುದ್ಧಿಮಾತು ಹೇಳಿದ್ದರು. ಕಿಚ್ಚನ ಮಾತನ್ನು ಪಾಲಿಸದೇ ಆಂಡ್ರ್ಯೂ, ಅಕ್ಷತಾಗೆ ಹುಚ್ಚು ನಾಯಿ ಎಂದು ಕರೆದಿದ್ದರು.

ಅಕ್ಷತಾಗೆ ನಾಯಿ ಎಂದು ಕರೆದಿದ್ದಲ್ಲದೇ ಜಯಶ್ರೀ ಹಾಗೂ ಸೋನು ತಲೆ ಮೇಲೆ ಮೊಟ್ಟೆಯನ್ನು ಹೊಡೆದಿದ್ದರು. ಇದನ್ನೂ ನೋಡಿದ ಕಿಚ್ಚ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಆಂಡ್ರ್ಯೂ ಅವರನ್ನು ಎಲ್ಲರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

sudeep andrew 2

ಶನಿವಾರದ ಸಂಚಿಕೆಯಲ್ಲಿ ಸುದೀಪ್, ಮಕ್ಕಳ ದಿನಾಚರಣೆಯನ್ನು ಚೆನ್ನಾಗಿ ಆಚರಿಸಿದ್ದೀರಿ. ಆದರೆ ಚೈಲ್ಡ್ ತರಹ ವರ್ತಿಸುವುದು ಬೇರೆ, ಚೈಲ್ಡಿಶ್ ಆಗಿ ವರ್ತಿಸುವುದು ಬೇರೆ ಎಂದರು. ನಂತರ ಸುದೀಪ್ ಸ್ಕೂಲಿನಲ್ಲಿ ಮಕ್ಕಳು ಟೀಚರ್ ಬುದ್ಧಿ ಮಾತು ಹೇಳಿ ಒಂದೆರಡು ಏಟು ಹೊಡೆಯುತ್ತಾರೆ ಯಾಕೆ? ಎಂದು ಆಂಡ್ರ್ಯೂಗೆ ಪ್ರಶ್ನಿಸಿದ್ದರು. ಏನಾದರೂ ಕೊರತೆಗಳಿದ್ದರೆ ಸರಿ ಮಾಡಿಕೊಳ್ಳಲಿ, ತಿದ್ದುಕೊಳ್ಳಲಿ ಎಂದು ಶಿಕ್ಷೆ ನೀಡುತ್ತಾರೆ ಎಂದು ಆಂಡ್ರ್ಯೂ ಉತ್ತರಿಸಿದ್ದರು.

sudeep andrew

ಆಗ ಸುದೀಪ್, ಈ ಜಗತ್ತಿನಲ್ಲಿ ಎಲ್ಲರಿಗೂ ಫ್ರೀಯಾಗಿ ಸಲಹೆ ಸಿಗುತ್ತದೆ. ಮೊದಲು ಅವರವರದ್ದನ್ನು ಅವರವರು ತೊಳೆದುಕೊಳ್ಳಬೇಕು. ನಂತರ ಬೇರೆ ಅವರದ್ದನ್ನು ತೊಳೆಯಬೇಕು ಎಂದು ಹೇಳಿದ್ದೀರಿ. ಈ ಜಗತ್ತಿನಲ್ಲಿ ನಾನು ಸೇರಿದ್ದೇನೆ. ಪ್ರತಿ ಶನಿವಾರ ಬಂದು ನಿಮ್ಮ ಜೊತೆ ಮಾತನಾಡುವಾಗ ನಿಮ್ಮ ಬಾಯಿಂದ ಬರುವ ಮಾತುಗಳು ನಾನು ಗಂಭೀರವಾಗಿ ತೆಗೆದುಕೊಳ್ಳಬೇಕು?. ಹಾಗಾಗಿ ನಾನು ನನ್ನದನ್ನು ತೊಳೆದುಕೊಳ್ಳುವೆನೆಂದು ನಿರ್ಧಾರ ಮಾಡಿದ್ದೇನೆ ಎಂದು ಸುದೀಪ್ ಆಂಡ್ರ್ಯೂವನ್ನು ತರಾಟೆಗೆ ತೆಗೆದುಕೊಂಡರು.

ಕಿಚ್ಚನ ಈ ಮಾತಿಗೆ ಆಂಡ್ರ್ಯೂ, “ಸರ್ ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಾ. ನಾನು ಈ ಮಾತನ್ನು ಮನೆಯಲ್ಲಿದ್ದವರಿಗೆ ಹೇಳಿದ್ದು” ಎಂದು ಸಮರ್ಥಿಸಿಕೊಂಡರು. ಆಗ ಸುದೀಪ್, ನಾನು ಹೇಳಿದ ಎಲ್ಲಾ ರೂಲ್ಸ್ ಗಳನ್ನು ನೀವು ಪಾಲಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಆಗ ಆಂಡ್ರ್ಯೂ ಯಾವುದನ್ನೂ ಇಲ್ಲ ಸರ್ ಎಂದು ಹೇಳುತ್ತಾ ತಲೆ ಬಗ್ಗಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *