ಚೆನ್ನೈ: ಕೆಲ ದಿನಗಳಿಂದ ತಮಿಳುನಾಡಿನಲ್ಲಿ (Tamil Nadu)ಮಳೆಯ ಅಬ್ಬರ (Heavy Rain) ಜೋರಾಗಿದ್ದು ದೇವಸ್ಥಾನಗಳಿಗೂ ನೀರು ನುಗ್ಗಿದೆ. ಇದರಿಂದ ದೇವಸ್ಥಾನದಲ್ಲಿ (Temple) ನಡೆಯಬೇಕಿದ್ದ ಎಷ್ಟೋ ಮದುವೆಗಳು ವಿಳಂಬವಾಗಿದ್ದು, ವಧುವರರು ಸರ್ಕಾರದ ಮೊರೆ ಹೋಗಿದ್ದಾರೆ.
#WATCH | Tamil Nadu: 5 weddings that were scheduled at Anjineyar temple in Pulianthope were delayed due to rainfall today. Couples lined up for wedding ceremonies were drenched as they walked through the water logged inside the temple. These weddings were scheduled months ago. pic.twitter.com/OA96wQEiz2
— ANI (@ANI) November 11, 2022
Advertisement
ಪುಲಿಯನ್‌ತೋಪ್‌ನ ಆಂಜಿನೇಯರ್ ದೇವಸ್ಥಾನದಲ್ಲಿ (Anjineyar Temple) ನಡೆಯಬೇಕಿದ್ದ 5 ಮದುವೆಗಳು ಮಳೆಯಿಂದಾಗಿ ವಿಳಂಬವಾಗಿವೆ. ಶುಕ್ರವಾರ ಭಾರೀ ಮಳೆಯ ನಡುವೆಯೂ ದೇವಸ್ಥಾನಕ್ಕೆ ಬಂದ ನವ ಜೋಡಿ ಮಳೆಯಲ್ಲೂ ಹರಸಾಹಸ ನಡೆಸಿ ಮದುವೆಯಾಗಿದೆ. ಬಳಿಕ ದೇವಸ್ಥಾನ ಜಲಾವೃತವಾಗಿದೆ, ನಾವೂ ಒದ್ದೆಯಾಗಿದ್ದೇವೆ, ದೇವಸ್ಥಾನದ ಆವರಣ ಮತ್ತು ಇತರ ಸಾರ್ವಜನಿಕ ಪ್ರದೇಶಗಳನ್ನು ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ (Tamilnadu Government) ಮನವಿ ಮಾಡುತ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ
Advertisement
Advertisement
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶಾಲಾ ಕಾಲೇಜುಗಳನ್ನು (Schools, College) ಬಂದ್ ಮಾಡಲಾಗಿದೆ. ಚೆನ್ನೈನ (Chennai) ತಿರುವಲ್ಲೂರ್, ಕಾಂಚಿಪುರಂ, ರಾಣಿಪೇಟ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್
Advertisement
ಈಗಾಗಲೇ ರಾಜ್ಯದಲ್ಲಿ ಮಳೆಗೆ ಮೂರು ಜೀವಗಳು ಬಲಿಯಾಗಿದೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವು ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.