ಬೆಂಗಳೂರು: ಇವಾಗ ನಗರದ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದೇನೆ. ನಾನು ಯಾವಾಗಲು ಜನರೊಂದಿಗೆ ಸಮಯ ಕಳೆಯುವಂತಹ ವ್ಯಕ್ತಿ. ಆದ್ರೆ ಫ್ಲ್ಯಾಟ್ ನಲ್ಲಿ ಅಕ್ಕಪಕ್ಕದವರು ಜನ ಬಂದರೆ ಯಾರದು? ಗಲಾಟೆ ಅಂತ ಹೇಳ್ತಾರೆ. ಹಾಗಾಗಿ ಮನೆಯಲ್ಲಿ ಒಬ್ಬನೇ ಕುಳಿತಾಗ ನಾಗಿಣಿ, ಸಿಂಧೂರ ಮತ್ತು ಹರ ಹರ ಮಹಾದೇವ ಮೂರು ಧಾರಾವಾಹಿಗಳನ್ನು ನೋಡುತ್ತೇನೆ ಎಂದು ಅಂಬರೀಶ್ ಪಬ್ಲಿಕ್ ಟಿವಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಮೊದಲೆಲ್ಲಾ ಒಂದೆರೆಡು ವಾಹಿನಿಗಳು ಇರುತ್ತಿತ್ತು. ಇವಾಗ ಚಾನೆಲ್ ಚೇಂಜ್ ಮಾಡುತ್ತಾ ಕುಳಿತರೆ ಸಾಕು 24 ಗಂಟೆ ಕಳೆದು ಹೋಗುತ್ತದೆ. ನನ್ನ ಸಿನಿಮಾಗಳನ್ನು ಎಂದು ಮನೆಯಲ್ಲಿ ನೋಡಲ್ಲ. ಗಾಲ್ಫ್, ಟೆನ್ನಿಸ್ ಮ್ಯಾಚ್ ಬಂದರೆ ರಾತ್ರಿ ಎನ್ನದೇ ಪೂರ್ಣವಾಗಿ ನೋಡುತ್ತೇನೆ. ಇನ್ನು ನಾನು ಮ್ಯಾಚ್, ಧಾರಾವಾಹಿ ನೋಡುತ್ತಾ ಕುಳಿತರೆ ಪತ್ನಿಗೆ ಬೇಜಾರು ಆಗಬಾರದು ಆಕೆಗೊಂದು ಬೇರೆ ಟಿವಿ ಕೊಡಿಸಿದ್ದೇನೆ ಎಂದು ಹೇಳಿ ಅಂಬಿ ನಕ್ಕರು.
Advertisement
Advertisement
ನನ್ನ ಜನಗಳೊಂದಿಗೆ ಇರಬೇಕು. ಅವರ ಜೊತೆಯೇ ನನ್ನ ಸಮಯವನ್ನು ಕಳೆಯಬೇಕು ಎಂದು ಇಷ್ಟಪಡುವ ವ್ಯಕ್ತಿ. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಬಂದ ಬಳಿಕ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚು ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇನೆ. ನಾನು ವಾಸವಾಗಿರುವ ಫ್ಲ್ಯಾಟ್ ಗೂ ಹೆಚ್ಚಿನ ಜನರನ್ನು ಕರೆಸಿಕೊಳ್ಳುವಂತಿಲ್ಲ. ಹೆಚ್ಚು ಜನರು ಸೇರಿದರೆ ನೆರೆಹೊರೆಯವರಿಗೆ ತೊಂದರೆ ಆಗುತ್ತೆ. ಒಂದು ರೀತಿ ಜೈಲಿನಲ್ಲಿ ಇದ್ದಂತೆ ಆಗುತ್ತಿದೆ. ಸಮಯ ಸಿಕ್ಕಾಗ ಗಾಲ್ಫ್ ಆಡಲು ಹೋಗುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಅಂಬಿಯ ಅಪಾಯದ ಭವಿಷ್ಯ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ
Advertisement
ಈಗಿನ ಕಾಲದ ಮಕ್ಕಳಿಗೆ ಏನು ಹೇಳೊದಕ್ಕೆ ಆಗಲ್ಲ. ನೀನು ಡಾಕ್ಟರ್ ಆಗು, ಎಂಜಿನೀಯರ್, ನಟನಾಗು ಎಂದು ಹೇಳೋದು ಕಷ್ಟ. ಇನ್ನು ಮದುವೆ ವಿಚಾರವಾಗಿ ಸಲಹೆ ನೀಡುವುದು ಕಷ್ಟ ಆಗುತ್ತೆ. ತಮಗೆ ಇಷ್ಟವಾದ್ರೆ ಯಾರನ್ನು ಬೇಕಾದರು ಮದುವೆ ಆಗಬಹುದು. ನನ್ನ ಮಗ ಇಂಡಸ್ಟ್ರಿಯಲ್ಲಿ ದೊಡ್ಡ ಹೀರೋ ಆಗಬೇಕು ಅಂತಾ ಎಂದು ನಾನು ಮತ್ತು ಸುಮಲತಾ ಆಸೆ ಪಟ್ಟಿಲ್ಲ. ನನ್ನ ಜೀವನವೇ ಬೇರೆಯಾಗಿದ್ದು ಸಿನಿಮಾ ಮತ್ತು ರಾಜಕೀಯದಲ್ಲಿಯೂ ನಾನಿದ್ದೇನೆ. ಹಾಗಾಗಿ ಈ ಎರಡರಲ್ಲಿ ಅವನಿಗೆ ಇದನ್ನೇ ಆಯ್ಕೆ ಮಾಡಿಕೊ ಅಂತ ಹೇಳಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿ ಯಾರಿಗೂ ಏನು ಹೇಳೊಂಗಿಲ್ಲ. ಅವರಿಗೆ ಇಷ್ಟ ಬಂದಿದ್ದನ್ನ ಮಾಡಲು ಬಿಡಬೇಕು. ಒಂದು ವೇಳೆ ಮಕ್ಕಳು ಇಷ್ಟಪಡುವ ವಲಯ ಅಥವಾ ಕೆಲಸದ ಬಗ್ಗೆ ನಮಗೆ ಗೊತ್ತಿದ್ದರೆ, ಅವರಿಗೆ ಸಲಹೆ ನೀಡಬಹುದು ಎಂದು ಹೇಳಿದ್ದರು. ಇದನ್ನೂ ಓದಿ: ಯಶ್, ಧ್ರುವ ಸರ್ಜಾಗೆ ಖಡಕ್ ವಾರ್ನಿಂಗ್ ನೀಡಿದ್ದ ಅಂಬಿ
Advertisement
ನಮ್ಮ ತಂದೆಗೆ ನಾನು ಡಾಕ್ಟರ್ ಆಗಬೇಕೆಂದ ಆಸೆ ಇತ್ತು. ಆದ್ರೆ ನಾನು ಆ್ಯಕ್ಟರ್ ಆದೆ. ಇಂದು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದ್ದರಿಂದ ನನ್ನ ಹೆಸರಿನ ಮುಂದೆ ಡಾಕ್ಟರ್ ಅಂತಾ ಬಂದಿದೆ. ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೆ, ಹೇಗಿರ್ತಿದ್ದೆ ಎಂಬುದನ್ನು ನನ್ನ ಪತ್ನಿ ಚೆನ್ನಾಗಿ ಹೇಳುತ್ತಾಳೆ. ನಾನು ಹೇಳಬಹುದಿತ್ತು, ಆದ್ರೆ ನನಗೆ ತುಂಬಾ ನಾಚಿಕೆ ಆಗುತ್ತೆ. ನಿಮಗೆ ಯಾವತ್ತಾದರೂ ಆಕೆ ಸಿಕ್ಕರೆ ಕೇಳಿ ಉತ್ತರ ಪಡೆದುಕೊಳ್ಳಿ ಅಂತಾ ಅಂದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv