BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

Public TV
2 Min Read
Sudeep

ಬೆಂಗಳೂರು: ಈ ಬಾರಿಯ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಮಾಡಲ್ವಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಸುದೀಪ್ ಅವರು ನೀಡಿದ ಹೇಳಿಕೆಯಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕೆಲವು ದಿನಗಳಲ್ಲೇ ಸೀಸನ್ 11 (Season 11) ಆರಂಭವಾಗಲಿದೆ. ಇಲ್ಲಿಯವರೆಗೂ ನಡೆದ 10 ಸೀಸನ್‌ಗಳನ್ನು ನಟ ಅಭಿನಯ ಚಕ್ರವರ್ತಿ ಸುದೀಪ್ (Abhinaya Chakravarty Sudeep) ನಿರೂಪಕರಾಗಿ ನಡೆಸಿಕೊಂಡು ಬಂದಿದ್ದರು.ಇದನ್ನೂ ಓದಿ: ಕೋರ್ಟ್ ಆದೇಶ ಪಾಲಿಸದ ಮಸ್ಕ್ – ಬ್ರೆಜಿಲ್‍ನಲ್ಲಿ ಎಕ್ಸ್ ಸೇವೆ ಸ್ಥಗಿತ

ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಸೀಸನ್ 11ರ ನಿರೂಪಕ ಬದಲಾಗುವ ಕುರಿತು ಸುದ್ದಿ ಎಲ್ಲೆಡೆ ಹಬ್ಬಿತ್ತು ಆದರೆ ಇದಕ್ಕೆ ಸಂಬಂಧಿಸಿದಂತೆ ವಾಹಿನಿಯಾಗಲಿ, ನಟ ಸುದೀಪ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ಎಂದು ಬಿಚ್ಚಿಟ್ಟರು.ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ನರ್ಸ್‌ ಮೇಲೆ ಅತ್ಯಾಚಾರ – 59ರ ವ್ಯಕ್ತಿ ಬಂಧನ

ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು. ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ವೋ ಪ್ರಶ್ನೆ ಎದುರಾಗಿದೆ. ಮಾಧ್ಯಮಗೋಷ್ಠಿಯಲ್ಲಿ ನಾನು ಶೋ ನಡೆಸಿಕೊಡುತ್ತೇನೆ ಅಥವಾ ನಡೆಸಿಕೊಡುವುದಿಲ್ಲ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ವಾಹಿನಿ ಸಹ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭವಾಗುವವರೆಗೂ ಕುತೂಹಲ ಮುಂದುವರಿಯಲಿದೆ.

Share This Article