ಬೆಂಗಳೂರು: ಪತ್ನಿಯ ದೇಹವನ್ನು ತುಂಡರಿಸಿ ಸೂಟ್ಕೇಸ್ಗೆ ತುಂಬಿ ಪತಿ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಪತಿ ರಾಕೇಶ್ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದೆ.
ಮಾ.27 ರಂದು ಹುಳಿಮಾವು (Hulimavu) ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ (Dodda Kammanahalli) ಭೀಕರ ಕೊಲೆ ನಡೆದಿತ್ತು. ಹತ್ಯೆಗೆ ಕಾರಣವೇನು ಎಂದು ತಿಳಿಯಲು ಸದ್ಯ ಟೆಕ್ಕಿ ರಾಕೇಶ್‌ನನ್ನು ಒಂದು ವಾರ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಪತ್ನಿ ಕೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಹಂತಕ – ಕಾರಣ ಬಾಯ್ಬಿಡದ ಟೆಕ್ಕಿ
ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿಯನ್ನು ಅಷ್ಟು ಭೀಕರವಾಗಿ ಕೊಲೆ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ ಟೆಕ್ಕಿ ರಾಕೇಶ್ ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ವಿಚಾರಣೆ ವೇಳೆ ಆರೋಪಿ ರಾಕೇಶ್ ತನ್ನ ಪತ್ನಿಯನ್ನು ಕೊಲ್ಲುವ ಉದ್ದೇಶವಿರಲಿಲ್ಲ. ಆದರೆ ಆಕೆಯಿಂದ ಪ್ರತಿದಿನ ಕಿರುಕುಳ ಅನುಭವಿಸಿದ್ದೀನಿ. ಪತ್ನಿಯಿಂದ ನಾನೇ ದೌರ್ಜನ್ಯಕ್ಕೆ ಒಳಗಾಗಿದ್ದೀನಿ ಎಂದು ತಿಳಿಸಿದ್ದಾನೆ.
ಕೊಲೆ ಮಾಡಿದ ನಂತರ ಯಾರಿಗೂ ಗೊತ್ತಾಗದ ಹಾಗೇ ಶವವನ್ನು ಸಾಗಿಸಲು ಸೂಟ್‌ಕೇಸ್‌ಗೆ ತುಂಬಿದೆ, ಆದರೆ ಸೂಟ್‌ಕೇಸ್ ತೂಕವಿದ್ದ ಕಾರಣ ಹೊತ್ತುಕೊಂಡು ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಅಲ್ಲಿಯೇ ಬಿಟ್ಟು ಹೋದೆ ಎಂದು ಹೇಳಿದ್ದಾನೆ.
ಘಟನೆ ಏನು?
ಪತ್ನಿ ದೇಹ ತುಂಡರಿಸಿ ಸೂಟ್ಕೇಸ್ಗೆ ತುಂಬಿ ಪತಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿತ್ತು. ಮಹಾರಾಷ್ಟ್ರ ಮೂಲದ ರಾಕೇಶ್ ಕೃತ್ಯ ಎಸಗಿರುವ ಆರೋಪಿ. ಗೌರಿ ಅನಿಲ್ ಸಾಂಬೆಕರ್ ಮೃತ ಪತ್ನಿ. ಮಹಾರಾಷ್ಟ್ರದಲ್ಲಿರುವ (Maharashtra) ಪತ್ನಿ ಪೋಷಕರಿಗೆ ಪೋನ್ ಕರೆ ಮಾಡಿ ಆರೋಪಿ ರಾಕೇಶ್ ಸಾವಿನ ಸುದ್ದಿ ತಿಳಿಸಿದ್ದನು.
ಖಾಸಗಿ ಕಂಪನಿಯಲ್ಲಿ ದಂಪತಿ ಕೆಲಸ ಮಾಡಿಕೊಂಡಿದ್ದರು. ವರ್ಕ್ ಫ್ರಂ ಹೋಂ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ದೊಡ್ಡಕಮ್ಮನಹಳ್ಳಿ ಮನೆಗೆ ಬಂದು ವಾಸವಿದ್ದರು. ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಪತಿ ಮೇಲೆ ಹತ್ಯೆಯಾದ ಗೌರಿ ಚಾಕು ಎಸೆದಿದ್ದಳು. ಅದೇ ಚಾಕುವಿನಿಂದ ಪತ್ನಿಯ ಹತ್ಯೆ ಮಾಡಿ ಹೊಟ್ಟೆ, ಕತ್ತು ಕತ್ತರಿಸಿ ಸೂಟ್ ಕೇಸ್‌ಗೆ ತುಂಬಿದ್ದ. ಕೂಡಲೇ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಮಾಡಿ, ಮನೆಯಲ್ಲಿ ಊಟ ಮಾಡಿದ್ದ. ಬಳಿಕ ರಾತ್ರಿ 11 ಗಂಟೆಗೆ ಕಾರಿನಲ್ಲಿ ಮೃತದೇಹ ಸಾಗಿಸುವ ಪ್ಲ್ಯಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗೋದಿಲ್ಲ. ಬಳಿಕ ಬಾತ್ ರೂಮ್‌ನಲ್ಲಿ ಮೃತದೇಹ ಇಟ್ಟು ರಾಕೇಶ್ ಪರಾರಿಯಾಗಿದ್ದ.ಇದನ್ನೂ ಓದಿ:ಹೆಂಡ್ತಿ ಕೊಂದು ಮಹಾರಾಷ್ಟ್ರ ಬಾರ್ಡರ್‌ನಲ್ಲಿ ವಿಷ ಖರೀದಿಸಿದ್ದ ಟೆಕ್ಕಿ – ಹಂತಕನನ್ನ ಪುಣೆಯಿಂದ ಕರೆತಂದ ಪೊಲೀಸರು
ಹತ್ಯೆಯಾದ 16 ಗಂಟೆಗಳ ಬಳಿಕ ಆರೋಪಿಯೇ ಪಕ್ಕದ ಮನೆಯ ಬಾಡಿಗೆದಾರನಿಗೆ ಕರೆ ಮಾಡಿ, ವಿಚಾರ ಹೇಳಿದ್ದ. ನಂತರ ಮೃತಳ ಕುಟುಂಬಸ್ಥರಿಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದ. ಬಳಿಕ ಮನೆಯ ಮಾಲೀಕರಿಗೆ ಮಾಹಿತಿ ದೊರೆತಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ರಾಕೇಶ್ ಹತ್ಯೆ ಮಾಡಿ ಪರಾರಿಯಾಗಿದ್ದ ಬಗ್ಗೆ ಸಿಡಿಆರ್ ಆಧರಿಸಿ ಹುಳಿಮಾವು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಾರಿಯಾಗಿದ್ದ ಆರೋಪಿ ರಾಕೇಶ್ ವಿಷ ಕುಡಿದು ಪುಣೆಯ ಶಿರ್ವಾಲ್ ಪೊಲೀಸ್ ಠಾಣೆ ಬಳಿ ಅಸ್ವಸ್ಥನಾಗಿ ಬಿದ್ದಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆರೋಪಿ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳಿತ್ತು.
ಮಾ.29 ರಂದು ರಾತ್ರಿಯೇ ಪೊಲೀಸರು ಆತನನ್ನ ಕೋರಮಂಗಲದ (Koramangala) ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರುಪಡಿಸಿದ್ದರು. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಿದ್ದರು. ಏ. 1ರಂದು ಓಪನ್ ಕೋರ್ಟ್‌ನಲ್ಲಿ ಬಾಡಿ ವಾರಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು.ಇದನ್ನೂ ಓದಿ:ಪತ್ನಿ ತುಂಡರಿಸಿ ಸೂಟ್ಕೇಸ್ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!