– ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ
ಯಾದಗಿರಿ: ಈ ಬಾರಿ ನಡೆಯೋದು ಮೋದಿ ಚುನಾವಣೆ, ಯಡಿಯೂರಪ್ಪ, ವಿಜಯೇಂದ್ರಗೆ ಸಂಬಂಧಪಡೋದಿಲ್ಲ. ನೀವ್ಯಾರು ಹೆದರೋಕೆ ಹೋಗ್ಬೇಡಿ. ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಬರ್ತೀನಿ, ನಾನೇ ಸಿಎಂ ಆಗ್ತಿನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Ytnal) ಬಾಂಬ್ ಸಿಡಿಸಿದ್ದಾರೆ.
ಯಾದಗಿರಿ (Yadgiri) ನಗರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತ್ತೆ ವಿಜಯೇಂದ್ರ ಹಾಗೂ ಯಡಿಯೂರಪ್ಪ (BS Yediyurappa) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಕರ್ನಾಟಕದಲ್ಲಿ ವಿಜಯೇಂದ್ರನನ್ನು (BY Vijayendra) ನೋಡಿ ವೋಟ್ ಹಾಕೋದಿಲ್ಲ. ಏಕೆಂದರೆ ಇದು ಮೋದಿ ಚುನಾವಣೆ, ವಿಜಯೇಂದ್ರನನ್ನ ತೆಗೆದುಕೊಂಡು ಏನು ಮಾಡೋದು. ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಆಗಿರಲಿ, ಸುಡುಗಾಡಾದ್ರೂ ಆಗಿರಲಿ. ರಾಜ್ಯದಲ್ಲಿ ಈ ಸಲ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತೆ. ಇದಕ್ಕೆ ವಿಜಯೇಂದ್ರ ಸಂಬಂಧಪಡಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್ ಒಲಿಂಪಿಕ್ಸ್ ಕನಸು ಜೀವಂತ
Advertisement
Advertisement
ಮುಂದುವರಿದು, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಯಾವಾಗ ಬಿಜೆಪಿಗೆ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ ಹೇಳಿ? ಯಡಿಯೂರಪ್ಪ ಅವರದ್ದು ಅಷ್ಟು ತೂಕ ಇದ್ದಿದ್ದರೆ, 130 ಸ್ಥಾನ ಬರಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?
ಮುಂದಿನ ಸಲ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗ್ತೀನಿ ಅಂತಾ ಕೆಲವರು ಈಗಲೇ ಬಿಳಿ ಅಂಗಿ ಹೊಲಿಸಿಕೊಂಡು ಕಾಯ್ತಿದ್ದಾರೆ. ಅವರೆಲ್ಲ ಹೊಂದಾಣಿಕೆ ಮಾಡಿಕೊಳ್ಳೋರು. ಅವರ ಮಗನ್ನ ಇವರು ಗೆಲ್ಲಿಸೋದು, ಇವರ ಮಗನ್ನ ಅವರು ಗೆಲ್ಲಿಸೋಕೆ ಹೆಣಗಾಡ್ತಿದ್ದಾರೆ. ನಾನು ಬಂದ ಮೇಲೆ ಅದೆಲ್ಲ ನಡೆಯೋದಿಲ್ಲ. ಸದನದಲ್ಲೇ ಡಿಕೆ ಶಿವಕುಮಾರ್‌ಗೆ ಹೋಗೋ ಅದೆಲ್ಲ ನಡೆಯಲ್ಲ ಅಂತಾ ಹೇಳಿದ್ದೀನಿ ಎಂದು ಗುಡುಗಿದ್ದಾರೆ.