ಮಂಡ್ಯ: ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಪ್ರಮುಖ ಟಾರ್ಗೆಟ್ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ (Mandya To India) ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ? ನನ್ನ ಮೇಲೆ ಮೊನ್ನೆ ಯಾವ ಆಧಾರದ ಮೇಲೆ ಕಂಪ್ಲೇಟ್ ಕೊಟ್ಟಿದ್ದೀರಾ? ಮೊನ್ನೆ ಯಾವುದೋ ಒಂದು ಎನ್‌ಸಿಆರ್ ಹಾಕಿದ್ದಾರೆ. ಎಫ್‌ಐಆರ್ ಮಾಡಿಸಲೆಬೇಕೆಂದು ಸಿಎಂ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಪ್ರಮುಖ ಟಾರ್ಗೆಟ್ ಎಂದರೆ ನಾನೇ. ಆದರೆ ನಾನು ನ್ಯಾಯಬದ್ಧವಾಗಿ ನ್ಯಾಯಾಲಯಕ್ಕೆ ಬಿಟ್ಟಿದ್ದೇನೆ ಎಂದು ಹೇಳಿದರು.ಇದನ್ನೂ ಓದಿ: ರಚಿನ್ ಅಮೋಘ ಶತಕ, ಇತಿಹಾಸ ನಿರ್ಮಿಸಿದ ಕಿವೀಸ್; ಭಾರತದ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ
Advertisement
Advertisement
ಕೇಂದ್ರ ಸರ್ಕಾರಕ್ಕೆ ಇಡಿ, ಎಸ್‌ಐಟಿ ಅಸ್ತ್ರ ಎಂದು ಹೇಳುತ್ತಾರೆ. ಸಿಎಂ ಮತ್ತು ಡಿಕೆಶಿಗೆ ಇನ್ವೇಸ್ಟಿಕೇಶನ್ ಟೀಮ್‌ಗಳಾಗಿವೆ. ಇವರ ಪ್ರಕಾರ ಎಸ್‌ಐಟಿ ಎಂದರೆ ಅಸ್ತ್ರಗಳು ಎಂದರ್ಥ. ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ. ಪರ ವಿರೋಧ ವಾದಗಳಾಗಿವೆ. ಅದರ ಆಧಾರದ ಮೇಲೆ ಕೋರ್ಟ್ ಯಾವ ರೀತಿ ತನಿಖೆ ಆಗಬೇಕೆಂದು ಹೇಳಿದ್ದು, ನ್ಯಾಯಯುತ ತನಿಖೆ ಆಗಬೇಕಿದೆ. ಲೋಕಾಯುಕ್ತದಲ್ಲಿ ನಿಮ್ಮ ಅಧಿಕಾರಿಗಳಿಂದ ತನಿಖೆ ಮಾಡಲು ಸಾಧ್ಯನಾ? ನಿಮ್ಮಂತ ನಡವಳಿಕೆ ಇರುವ ಸರ್ಕಾರದಲ್ಲಿ ಸತ್ಯಾಂಶ ಹೊರಬರಲ್ಲ. ಈಗ ಇಡಿ ಬಂದಿದೆ ಮುಂದೆ ಏನು ಆಗುತ್ತದೆ ಎಂಬುವುದನ್ನು ನೋಡೋಣ ಎಂದರು.
Advertisement
ಸೈಟ್ ಕೊಟ್ಟಿದ್ದು ಯಾಕೆ?
ಇಡಿ ಅಧಿಕಾರಿಗಳು ಮುಡಾ ಕಚೇರಿ (MUDA Office) ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿರುವ ಕುರಿತು ಮಾತನಾಡಿದ ಅವರು, ಮುಡಾ ಹಗರಣ (MUDA Scam) ಅತ್ಯಂತ ಕೆಟ್ಟ ರೀತಿಯಲ್ಲಿ ಆಗಿದೆ. ಸರ್ಕಾರದ ಭೂಮಿಯನ್ನು ಕಬಳಿಸಿದ್ದಾರೆ ಆದಕಾರಣ ಸೈಟ್‌ನ್ನು ವಾಪಸ್ಸು ಕೊಟ್ಟಿರಬಹುದು. ಕಾನೂನು ಬದ್ಧವಾಗಿ ಸೈಟ್ ಪಡೆದಿದ್ದರೆ ಯಾಕೆ ವಾಪಸ್ಸು ಕೊಟ್ಟಿದ್ದೀರಾ? ಸೈಟ್ ಹಂಚಿಕೆಯಲ್ಲಿ ತಪ್ಪು ಮಾಡಿದ್ದೀರಿ ಅದಕ್ಕೆ ವಾಪಸ್ ಕೊಟ್ಟಿದ್ದೀರಿ. ನಿಮ್ಮ ಲೋಕಾಯುಕ್ತ ಅಧಿಕಾರಿಗಳಿಂದ ಸರಿಯಾಗಿ ತನಿಖೆ ಆಗಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ:ಮುಡಾ ಕೇಸ್‌ನಲ್ಲಿ ಹಣಕಾಸು ವಹಿವಾಟು ನಡೆದಿಲ್ಲ, ಹಣಕಾಸಿನ ವಿಚಾರ ಎಲ್ಲೂ ತನಿಖೆಯಾಗಿಲ್ಲ: ಡಿ.ಕೆ.ಸುರೇಶ್
ಬೆಂಗಳೂರು (Bengaluru) ನಗರದಲ್ಲಿ ತಮ್ಮ ಹಣದ ದಾಹಕ್ಕೆ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ನುಂಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಆಗುತ್ತಿದೆ. ನಿಮ್ಮ ಭೂ, ಹಣದ ದಾಹದಿಂದ ಬೆಂಗಳೂರು ಹೀಗೆ ಆಗಿದೆ. ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಮಳೆ ಬಂದು ಮುಳುಗುತ್ತಿಲ್ಲ. ಕೆರೆಗಳು, ರಾಜಕಾಲುವೆಗಳನ್ನು ಯಾಕೆ ಉಳಿಸಿಲ್ಲ. ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ಪುಟ್ಟೇನಹಳ್ಳಿ, ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿ ಡಾಲರ್ಸ್ ಕಾಲೋನಿ ಎಂದು ಮಾಡಿದರು. ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು ಎಂದರು.
ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇವರಿಗೆ ಇಲ್ಲ. ಮಳೆ ಬಂದರೆ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ನೀರು ಖಾಲಿ ಮಾಡುತ್ತಾರಾ? ನಾನು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಗಾಗಿ (JNUM) 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿದ್ದೇನೆ. ಅದರಲ್ಲಿ ಡಿಸಿಎಂ 50 ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿ 50 ಲಕ್ಷ ಜನ ಇರಲು ಸಾಧ್ಯಾನಾ? ಒಂದು ವೇಳೆ ಇದ್ದರೆ ಬೆಂಗಳೂರು ಜನಸಂಖ್ಯೆ ಎಷ್ಟು? ಸುಳ್ಳು ಹೇಳಲು ಒಂದು ಇತಿಮಿತಿ ಬೇಡವಾ? ಇದೊಂದು ನಗೆಯ ಪಾಟಲು ಎಂದು ವ್ಯಂಗ್ಯವಾಡಿದರು.
ಕೆರೆ ಎಷ್ಟು ಭರ್ತಿಯಾಗಿದೆ?
ಕೆಆರ್‌ಎಸ್ ಡ್ಯಾಂ 2 ಬಾರಿ ಬರ್ತಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂ (KRS Dam) ವ್ಯಾಪ್ತಿಯಲ್ಲಿ 900 ಕೆರೆಗಳು ಇವೆ. ಎಷ್ಟು ಕೆರೆಗಳನ್ನು ಈ ಸರ್ಕಾರ ತುಂಬಿಸಿದೆ? ಎಲ್ಲಾ ನೀರನ್ನು ತಮಿಳುನಾಡಿಗೆ (Tamilnadu) ಬಿಟ್ಟಿದ್ದಾರೆ. ನನಗೆ ಮೇಕೆದಾಟಿಗೆ ಪ್ರಧಾನಿಗಳ ಹತ್ತಿರ ಅನುಮತಿ ಕೊಡಿಸಿ ಎಂದು ಹೇಳುತ್ತಿರಾ? ತಮಿಳುನಾಡಿನವರು ನಿಮ್ಮ ಸ್ನೇಹಿತರು ಅವರ ಹತ್ತಿರ ಮಾತಾಡಿ ಒಪ್ಪಿಸಿ. ಬಳಿಕ ಕರೆದುಕೊಂಡು ಬನ್ನಿ ಐದು ನಿಮಿಷದಲ್ಲಿ ಸಹಿ ಹಾಕಿಸಿಕೊಡ್ತೀನಿ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ ವಸಿಷ್ಠ ಸಿಂಹ