ಹಾಸನ: ನನಗೆ ನಾನೇ ಹೈಕಮಾಂಡ್, ನನಗೆ ಯಾರು ಹೈಕಮಾಂಡ್ ಇಲ್ಲ ಎಂದು ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ (Rajaana)ಹೇಳಿದ್ದಾರೆ.
ಬೇಲೂರಿನಲ್ಲಿ (Belur) ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನಾನೇ ಹೈಕಮಾಂಡ್ ನನಗೆ ಯಾರೂ ಹೈಕಮಾಂಡ್ ಇಲ್ಲ. ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್. ರಾಜ್ಯಾಧ್ಯಕ್ಷರು, ರಾಷ್ಟಾçಧ್ಯಕ್ಷರು ಎಲ್ಲಾ ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ. ಅವರ ಮಾತು ಯಾವುದು ಕೇಳಬೇಕು, ಅದನ್ನ ಕೇಳುತ್ತೇವೆ. ಅವರ ಮಾತನ್ನು ನಾನು ಧಿಕ್ಕರಿಸಲ್ಲ. Ultimately I Belive, My High Command, My constituency Voters ಎಂದಿದ್ದಾರೆ. ಇದನ್ನೂ ಓದಿ: ಪ್ರೀತಿಸಲು ಒಪ್ಪದ ಬಾಲಕಿ ಕೊಂದಿದ್ದವನಿಂದ ಆತ್ಮಹತ್ಯೆ ಯತ್ನ- ಸಾಯಲು ಬಿಡಿ ಎಂದು ಡ್ರಾಮಾ
Advertisement
Advertisement
ಕೆ.ಎನ್.ರಾಜಣ್ಣ (K.N.Rajanna) ಕೆಪಿಸಿಸಿ ಅಧ್ಯಕ್ಷರ ತರ ಆಡ್ತಿದ್ದಾರೆ ಎಂಬ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಅಪ್ಪ ಅಂತ ಹೇಳಿ, ಅದಕ್ಕಿಂತ ಮೇಲೆ ಯಾರಾದರೂ ಇದ್ದರೆ ಅದಕ್ಕೂ ಅಪ್ಪನೇ. ನನ್ನ ನಡವಳಿಕೆಯನ್ನ ಜನರು ಮೆಚ್ಚಬೇಕು ಅಷ್ಟೇ. ಮುಖಂಡರು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ. ಹೈಕಮಾಂಡ್‌ಗೆ ಹೆದರುವವರಿಗೆ ನಾವೇನು ಹೇಳಲು ಆಗುತ್ತೆ ಎಂಬ ಬಿ.ಶಿವರಾಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅದು ನನ್ನ ಇಷ್ಟ ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ. I am Loyal, I am obedient to HighCommand. Not The Slave ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ
Advertisement
Advertisement
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸರ್ಕಾರದ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಕೇಳ್ತಿದ್ದಾರೆ ಅಂತ ದೂರು ಕೊಡಬೇಕಲ್ಲ ಅವರು. ಪ್ರಧಾನಮಂತ್ರಿ ಮೋದಿಯವರು ರಾತ್ರಿ ಫೋನ್ ಮಾಡಿದ್ರು, ಏನೋ ಹೇಳಿದ್ರು ಅಂತ ನಾನು ಹೇಳಲು ಆಗುತ್ತಾ? ದೂರು ಕೊಡಬೇಕಲ್ಲ? ಯಾವ ಅಧಿಕಾರಿಗಳು ಕೇಳಿದ್ದಾರೆ ಎಷ್ಟು ಕೇಳಿದ್ದಾರೆ ಏನಾದರೂ ಹೇಳಬೇಕಲ್ಲ? ಕೆಂಪಣ್ಣನ ಬಗ್ಗೆ ಗೌರವವಿದೆ, ಸತ್ಯ ಹೇಳ್ತಾರೆ ಅಂತ ನಾನು ನಂಬುತ್ತೀನಿ. ನಿರ್ದಿಷ್ಟವಾಗಿ ಅವರು ಹೇಳಬೇಕು. ಮೂರು ಲಕ್ಷಕ್ಕೂ ಅಧಿಕ ಅಧಿಕಾರಿಗಳು ಇದ್ದಾರೆ. ಯಾವ ಅಧಿಕಾರಿ ದುಡ್ಡು ಕೇಳ್ತಾರೆ, ಯಾರ ಪರವಾಗಿ ಕೇಳ್ತಾರೆ, ಯಾವ ವಿಚಾರಕ್ಕೆ ಕೇಳ್ತಾರೆ ಅಂತ ಹೇಳಿದರೆ ಅವರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚುತ್ತೆ ನಮಗೆ. ಬಿಜೆಪಿಯವರು ಇದನ್ನು ಅಸ್ತçವಾಗಿ ಬಳಸಿಕೊಳ್ಳಲಿ ಹೇಳಿ, ಯಾರು ಬೇಡ ಅಂತಾರೆ. ಯಾರೂ ಸನ್ಯಾಸಿಗಳಲ್ಲಾ, ಎಲ್ಲರೂ ರಾಜಕೀಯ ಮಾಡುವವರೇ. ಯಾವ ಅಂಶಗಳು ಅವರಿಗೆ ಬೆಂಬಲವಾಗಿರುತ್ತೆ ಅದನ್ನು ಬಳಸಿಕೊಂಡು ಮಾಡಲಿ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ: ಸಿಎಂ ವಾಗ್ದಾಳಿ
ಇದೇ ವೇಳೆ ಲೋಕಸಭಾ ಚುನಾವಣೆ ತಯಾರಿ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಯಾರು ಅಭ್ಯರ್ಥಿ ಆಗಬೇಕು ಎಂದು ದೆಹಲಿ ಮಟ್ಟದಲ್ಲಿ ಕೂಡಾ ಚರ್ಚೆ ಆಗಿದೆ. ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ಬರುತ್ತಾರೆ. ಎಲ್ಲರೊಟ್ಟಿಗೆ ಚರ್ಚೆ ಮಾಡಿ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಏನು ಮಾಡುತ್ತೆ, ಅವರು ಅಭ್ಯರ್ಥಿ ಆಗುತ್ತಾರೆ. ಹಾಸನ ಜಿಲ್ಲೆಯಲ್ಲೂ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಮಾಜಿ ಸಚಿವ ದಿ.ಶ್ರೀಕಂಠಯ್ಯ ಅವರ ಮಗ ವಿಜಯ್‌ಕುಮಾರ್, ಶ್ರೇಯಸ್ ಪಟೇಲ್, ಬಿ.ಶಿವರಾಂ, ಬಾಗೂರು ಮಂಜೇಗೌಡ, ಗೋಪಾಲಸ್ವಾಮಿ ಹೀಗೆ ಹಲವರು ಇದ್ದಾರೆ ಎಂದು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಕಾನೂನು ಉಲ್ಲಂಘನೆ ಮಾಡುವವರ ಪರವಾಗಿದೆ: ಈಶ್ವರಪ್ಪ ವಾಗ್ದಾಳಿ