ಕೀವ್: ಉಕ್ರೇನ್-ರಷ್ಯಾ ನಡುವೆ ಘನಘೋರ ಯುದ್ಧ ಮುಂದುವರಿದಿದೆ. ಈ ಮಧ್ಯೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‌ನಲ್ಲಿ ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ
Advertisement
Advertisement
ಇದೇ ವೇಳೆ, ಕ್ರೆಮ್ಲಿನ್ ಆಧಾರಹಿತ ಆರೋಪಗಳನ್ನು ಅಮೆರಿಕ ಸೇರಿ ಹಲವು ದೇಶಗಳು ಖಂಡಿಸಿವೆ. ಆರೋಪ- ಪ್ರತ್ಯಾರೋಪಗಳ ನಡುವೆ ಉಕ್ರೇನ್‍ನ ಪ್ರಯೋಗಶಾಲೆಗಳಲ್ಲಿ ಇರುವ ತೀವ್ರ ಅಪಾಯ ಉಂಟು ಮಾಡುವ ಅಂಟುರೋಗಗಳ ಕ್ರಿಮಿಗಳನ್ನು ನಾಶಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.
Advertisement
Advertisement
ರಷ್ಯಾ ದಾಳಿಯಿಂದ ಲ್ಯಾಬ್‍ಗಳು ಧ್ವಂಸವಾಗಿ, ಸಾಂಕ್ರಾಮಿಕ ರೋಗ ಹರಡಬಲ್ಲ ಕ್ರಿಮಿಗಳು ಹೊರಗೆ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಜನ-ಜಾನುವಾರುಗಳ ಮೇಲೆ ಈ ಕ್ರಿಮಿಗಳ ಪ್ರಭಾವ ಕಡಿಮೆ ಮಾಡುವ ಸಲುವಾಗಿ ಉಕ್ರೇನ್‍ನ ಹಲವು ಲ್ಯಾಬ್‍ಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದವು.