ಚಂಡೀಗಢ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (AAP) ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಪಂಜಾಬ್ ಸಂಸ್ಕೃತಿ ಪ್ರತೀಕವಾಗಿ ಎಲ್ಲರೂ ಹಳದಿ ಪೇಟವನ್ನು ಧರಿಸಿ ಗಮನ ಸೆಳೆದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ
Advertisement
Advertisement
ಈ ವೇಳೆ ಮಾತನಾಡಿದ ಭಗವಂತ್ ಮಾನ್, ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಧ್ಯಯವೊಂದು ಪ್ರಾರಂಭವಾಗಿದೆ. ಇದು ಉಡ್ತಾ ಪಂಜಾಬ್ ಬದಲಿಗೆ ಪ್ರಗತಿಪರ ಪಂಜಾಬ್ ಆಗಲಿದೆ ಎಂದು ಅಭಿಪ್ರಾಯಪಟ್ಟರು. ʻಉಡ್ತಾ ಪಂಜಾಬ್ʼ ಎನ್ನುವ ಮೂಲಕ 2016ರಲ್ಲಿ ಪಂಜಾಬ್‌ನಲ್ಲಿ ವ್ಯಾಪಿಸಿದ್ದ ಡ್ರಗ್ ದಂಧೆ ಕುರಿತು ಉಲ್ಲೇಖಿಸಿದರು.
Advertisement
ನಾನು ಇಂದು ಯಾರನ್ನೂ ತಿರಸ್ಕರಿಸಲು ಬಂದಿಲ್ಲ. ನಾನು ಪಂಜಾಬ್‌ನಲ್ಲಿ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿಯಾಗಿದ್ದೇನೆ. ನಮ್ಮ ಪಕ್ಷಕ್ಕೆ ಮತ ಹಾಕದವರಿಗೂ ನಾನು ಮುಖ್ಯಮಂತ್ರಿ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೃದಯಸ್ಪರ್ಶಿ ಫೋಟೋ ಜೊತೆಗೆ ಭಗವಂತ ಮಾನ್‌ಗೆ ಶುಭಕೋರಿದ ಹರ್ಭಜನ್ ಸಿಂಗ್
Advertisement
ಅಹಂಕಾರಕ್ಕೆ ಒಳಗಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಮಗೆ ಮತ ಹಾಕದವರನ್ನೂ ನಾವು ಗೌರವಿಸಬೇಕು ಎಂದು ಪಕ್ಷದ ಶಾಸಕರಿಗೆ ಕರೆ ನೀಡಿದರು.
ಪ್ರೀತಿ ನಮ್ಮ ಜನ್ಮಸಿದ್ಧ ಹಕ್ಕು. ನಮ್ಮ ತಾಯ್ನಾಡನ್ನು ನಾವು ಯಾಕೆ ಪ್ರೀತಿಸಬಾರದು? ಹಿಂದೆ ಅರಮನೆಗಳಲ್ಲಿ ಪ್ರಮಾಣ ವಚನ ಸಮಾರಂಭಗಳು ನಡೆಯುತ್ತಿದ್ದವು. ನನ್ನ ಹೃದಯದಲ್ಲಿ ಭಗತ್‌ಸಿಂಗ್ ಅವರಿಗೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಲ್ಲಿ ಝೆಲೆನ್ಸ್ಕಿ ಇಲ್ಲಿ ಮಾನ್ – ಒಂದೇ ಹಿನ್ನೆಲೆಯ ರಾಜಕಾರಣಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್
48 ವರ್ಷ ವಯಸ್ಸಿನ ಭಗವಂತ್ ಮಾನ್ ಅವರು 1970ರ ನಂತರ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮಂಗಳವಾರ ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.