ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ (Birthday). ಈ ಹುಟ್ಟು ಹಬ್ಬಕ್ಕೆ ಚಿರು ಪತ್ನಿ ಮೇಘನಾ ರಾಜ್ (Meghana Raj) ಭಾವುಕ ಸಾಲುಗಳನ್ನು ಬರೆದಿದ್ದಾರೆ. ಜೊತೆಗೆ ಇಬ್ಬರೂ ನಗುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಫೋಟೋ ಜೊತೆ ಕೆಲ ಸಾಲುಗಳನ್ನು ಬರೆದಿರುವ ಮೇಘನಾ, ‘ನನ್ನ ಖುಷಿಗೆ ಹುಟ್ಟು ಹಬ್ಬದ ಶುಭಾಶಯಗಳು. ಇಂದು ನಾನು ನಗುತ್ತಿದ್ದೇನೆ ಅಂದರೆ, ಅದು ನಿನಗಾಗಿ ಮಾತ್ರ. ನನ್ನ ಆತ್ಮೀಯ ಪತಿ ಚಿರು.. ಐ ಲವ್ ಯೂ’ ಎಂದು ಬರೆದಿದ್ದಾರೆ.
Advertisement
ಚಿರು (Chiranjeevi Sarja) ಮತ್ತು ಮೇಘನಾ ರಾಜ್ ಮೊದ ಮೊದಲು ಕಲಾವಿದರಾಗಿ ಪರಿಚಯವಾದವರು. ಆನಂತರ ಇಬ್ಬರಲ್ಲೂ ಸ್ನೇಹ ಚಿಗುರಿತು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಹೀಗಾಗಿ ಇಬ್ಬರೂ ಪರಸ್ಪರ ಆ ಪ್ರೀತಿಯನ್ನು ಒಪ್ಪಿಕೊಂಡು, ಮನೆಯವರ ಅನುಮತಿ ಪಡೆದುಕೊಂಡೇ ಮದುವೆಯಾದರು. ಈ ಮದುವೆ ಸಿನಿಮಾ ರಂಗದ ಅನೇಕರು ಸಾಕ್ಷಿಯಾದರು. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ
Advertisement
Advertisement
ಮೇಘನಾ ಮತ್ತು ಚಿರು ಅವರದ್ದು ವಿಶೇಷ ರೀತಿಯ ಮದುವೆ. ಮೇಘನಾ ರಾಜ್ ಕುಟುಂಬ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಮಾಡಿದರೆ, ಚಿರು ಕುಟುಂಬ ಹಿಂದೂ ಸಂಪ್ರದಾಯದಂತೆ ಇಬ್ಬರನ್ನೂ ಸತಿಪತಿಯಾಗಿಸಿದರು. ಎರಡೂ ಕುಟುಂಬಗಳು ಒಪ್ಪಿಕೊಂಡು ಅದ್ದೂರಿಯಾಗಿಯೇ ಮದುವೆ ಮಾಡಿದರು. ಆದರೆ, ಎರಡೂ ಕುಟುಂಬಕ್ಕೂ ಈ ಆನಂದ ಹೆಚ್ಚು ಕಾಲ ಉಳಿಯಲಿಲ್ಲ.
Advertisement
ಚಿರಂಜೀವಿ ಸರ್ಜಾ ಅತೀ ಚಿಕ್ಕ ವಯಸ್ಸಿನಲ್ಲೇ 2020ರ ಜೂನ್ 7 ರಂದು ಹೃದಯಾಘಾತದಿಂದ ನಿಧನರಾದರು. ಜೊತೆಗೆ ಮೇಘನಾಗೆ ಉಡುಗೊರೆ ಎನ್ನುವಂತೆ ಪುತ್ರ ರಾಯನ್ ರಾಜ್ ಸರ್ಜಾ (Rayan Sarja) ಮಗುವನ್ನು ಕೊಟ್ಟು ಹೋಗಿದ್ದಾರೆ. ಮಗುವಲ್ಲೇ ಪತಿಯನ್ನೂ ಕಾಣುತ್ತ ದಿನಗಳನ್ನು ದೂಡುತ್ತಿದ್ದಾರೆ ಮೇಘನಾ ರಾಜ್.