ಹೈದರಾಬಾದ್: ನಾನು ಸೀನಿಯರ್ ರೌಡಿಯಾಗಿದ್ದು, ನನಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕರಿಗೆ ಬೇಡಿಕೆ ಇಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಗಾಗಿ ಪೈಟೋಟಿ ಆರಂಭಿಸಿದ್ದಾರೆ. ಇದರ ಪರಿಣಾಮ ಮುಖಂಡರು ಪಕ್ಷದ ನಾಯಕರ ಗಮನ ತಮ್ಮತ್ತ ಸೆಳೆಯಲು, ಟಿಕೆಟ್ ಪಡೆಯುಲು ಒತ್ತಡ ಹಾಕುವ ಕಾರ್ಯತಂತ್ರ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲೂ ಮೈತ್ರಿ ರಾಜಕೀಯ ಮಾಡುತ್ತಿದ್ದು, ಪಕ್ಷದ ಮುಖಂಡರೊಬ್ಬರು ತಾವು ಕ್ಷೇತ್ರದಲ್ಲಿ ಸೀನಿಯರ್ ರೌಡಿ ಶೀಟರ್ ಆಗಿದ್ದು, ನನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಮಾಧ್ಯಮಗಳ ಮುಂದೆಯೇ ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಸುಧೀರ್ ರೆಡ್ಡಿ ಎಂಬಾತ, ನಾನು ಪಕ್ಷಕ್ಕಾಗಿ ದುಡಿದ್ದೇನೆ. ಪಕ್ಷಕ್ಕಾಗಿಯೇ ರೌಡಿ ಶೀಟರ್ ಆಗಿದ್ದೇನೆ. ವಾರಂಗಲ್ ಕ್ಷೇತ್ರದಲ್ಲಿ ನಾನೇ ಸೀನಿಯರ್ ಕೂಡ ನಾನೇ ಎಂದು ಹೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
Advertisement
ನಾನು ಯಾವುದೇ ಕಾನೂನು ಬಹಿರ ಕೃತ್ಯಗಳಲ್ಲಿ ತೊಡಗಿಲ್ಲ. ಯಾರ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿಲ್ಲ. ಅಲ್ಲದೇ ಆರ್ಥಿಕ ಅವ್ಯವಹಾರದಲ್ಲಿ ತೊಡಗಿಲ್ಲ. ಪಕ್ಷದ ಕಾರ್ಯಗಳನ್ನು ಮಾಡುವುದರಿಂದಲೇ ನನ್ನ ಮೇಲಿನ ದ್ವೇಷದಿಂದ ರೌಡಿ ಶೀಟರ್ ಪಟ್ಟಿಗೆ ನನ್ನ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ರೆಡ್ಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Telangana- Fight over Congress Palakurthy ticket in Warangal. According to a few Congress leaders- the seniot ‘rowdy’ in the party should get the ticket. Nenu nee kanna senior rowdy nenu- says Sudhir Reddy to his opponent Raghav Reddy. #Congress #Telangana #TelanganaElections pic.twitter.com/CF5M8vSLIv
— Rishika Sadam (@RishikaSadam) October 27, 2018