ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು ಈಗ ಕೇವಲ ಹನ್ನೊಂದು ಮಂದಿ. ಈಗ ಇರುವವರ ನಡುವೆ ಬೆಸೆದಿರುವ ಸ್ನೇಹ ಎಂಥದ್ದು ಎಂಬುದು ತುಂಬಾ ಮುಖ್ಯವಾಗುತ್ತದೆ. ಅಂತೆಯೇ ಇತ್ತೀಚೆಗೆ ರೂಪೇಶ್ ಗೆ ಗುರೂಜಿ ಎಷ್ಟು ಮುಖ್ಯ ಎಂಬುದು ಸಾಬೀತಾಗಿದೆ.
ಬಿಗ್ ಬಾಸ್ ಇಂದು ಮನೆ ಸದಸ್ಯರಿಗೆ ಹೊಸದೊಂದು ಗೇಮ್ ನೀಡಿದ್ದರು. ಅದು ಇಷ್ಟ-ಕಷ್ಟ ಎಂಬುದಾಗಿತ್ತು. ಈ ಆಟದಿಂದ ಯಾರ ಮನಸ್ಸಲ್ಲಿ ಯಾರಿಗೆ ಎಷ್ಟು ಸ್ಥಾನ ಇದೆ ಎಂಬುದು ಕೂಡ ಸ್ಪಷ್ಟವಾಗಿತ್ತು. ನೀಲಿ ಮತ್ತು ಕೆಂಪು ಬಣ್ಣದ ದೊಡ್ಡ ಬಾಕ್ಸ್ ನಲ್ಲಿ ಒಂದಷ್ಡು ಗಿಫ್ಟ್ ಐಟಂ ಗಳನ್ನು ಇಟ್ಟಿದ್ದರು. ಅದರಲ್ಲಿ ಯಾವುದಾದರೊಂದು ಗಿಫ್ಟನ್ನು ತಾನು ಇಷ್ಟಪಟ್ಟವರಿಗೆ ವಿವರಣೆ ಸಮೇತ ನೀಡಬೇಕಾಗಿತ್ತು.
ಮೊದಲು ಹೋದ ಆರ್ಯವರ್ಧನ್, ಒಂದು ಗೊಂಬೆಯನ್ನು ಎತ್ತಿಕೊಂಡರು. ಅದನ್ನು ತನ್ನ ಮಗಳೆಂದರು. ನನಗೆ ನನ್ನ ಮಗಳೆಂದರೆ ತುಂಬಾನೇ ಪ್ರೀತಿ. ಈ ಪ್ರೀತಿಯ ಗೊಂಬೆಯನ್ನು ನನ್ನ ಮಗಳೆಂದೇ ಅಂದುಕೊಂಡಿದ್ದೀನಿ. ಇದನ್ನು ನಾನು ತುಂಬಾ ಇಷ್ಟಪಡುವ ರೂಪೇಶ್‍ಗೆ ಕೊಡುತ್ತೀನಿ ಎಂದಿದ್ದಾರೆ. ರೂಪೇಶ್ ತನ್ನ ಮೇಲೆ ಬರೆದಿದ್ದ ಹಾಡು ತುಂಬಾನೇ ಇಷ್ಟವಾಯಿತು. ಹೀಗಾಗಿ ಈ ಗೊಂಬೆಯನ್ನು ರೂಪೇಶ್ ಗೆ ಕೊಡುತ್ತಿದ್ದೀನಿ ಎಂದರು. ಇದನ್ನೂ ಓದಿ: ನನಗೇನೂ 18 ವರ್ಷವಲ್ಲ. ನಾನು 23 ವರ್ಷದ ಹುಡುಗಿ, ನನಗೆ ಎಲ್ಲಾ ಗೊತ್ತಿದೆ ಅಂದ ಸೋನು
ಇತ್ತ ರೂಪೇಶ್ ನ ಸರದಿ ಬಂದಾಗ, ಅಲ್ಲಿ ಸಾನ್ಯಾ ಕೂಡ ತುಂಬಾ ಮುಖ್ಯವಾಗಿದ್ದಳು. ಆದರೆ ರೂಪೇಶ್ ಇಬ್ಬರನ್ನು ತುಂಬಾ ಅದ್ಭುತವಾಗಿ ಮೆಂಟೈನ್ ಮಾಡಿದರು. ಸಾನ್ಯಾ ನನ್ನ ಬೆಸ್ಟ್ ಫ್ರೆಂಡ್. ನಾನು ಒಂಟಿಯಾಗಿದ್ದಾಗೆಲ್ಲ ನನ್ನ ಕಣ್ಣೀರು ಒರೆಸಿದ್ದಾಳೆ. ಯಾರು ಏನೇ ಹೇಳಲಿ ಅವಳನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಂಗೆ ಲೈಫ್ ನಲ್ಲಿ ಸಿಕ್ಕಂತ ಒಳ್ಳೆ ಫ್ರೆಂಡ್. ಯಾವಾಗಲೂ ಕಾಪಾಡಿಕೊಳ್ಳುತ್ತೀನಿ. ಆದರೆ ಈ ಗಿಫ್ಟ್ ಅನ್ನು ಆರ್ಯವರ್ಧನ್ ಅವರಿಗೆ ಕೊಡಬೇಕು ಎನಿಸಿದೆ ಅಂದ್ರು. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?
ಅಲ್ಲದೆ ಅದಕ್ಕೆ ಕಾರಣ ಕೂಡ ನೀಡಿದರು. ನಾನು ಅಮ್ಮನನ್ನು ಬೇಗ ಕಳೆದುಕೊಂಡೆ, ತಂದೆಯ ಪ್ರೀತಿ ಬೇಕು ಎಂಬ ಹಂಬಲ ಇತ್ತು. ಆದರೆ ಅಪ್ಪನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ, ಮನೆಯ ಜವಾಬ್ದಾರಿ ಕೂಡ ಇತ್ತು. ಹೀಗಾಗಿ ಅಪ್ಪನ ಪ್ರೀತಿ ಹೆಚ್ಚು ಸಿಗಲಿಲ್ಲ. ಆದರೆ ಆರ್ಯವರ್ಧನ್ ಅವರಲ್ಲಿ ನನ್ನ ಅಪ್ಪನನ್ನು ಕಂಡೆ ಎಂದು ಭಾವುಕರಾಗಿದ್ದಾರೆ.
ಇಂದು ಬೆಳಗ್ಗೆ ಅಪ್ಪನ ಕನಸು ಕೂಡ ಬಿದ್ದಿದೆ. ಗುರೂಜಿ ಅವರ ಜೀವನ ಯಾವತ್ತು ಬೆಳಗುತ್ತಾ ಇರಲಿ, ನೀವೂ ಬೆಳಗುತ್ತಾ ಇರಬೇಕು ಎಂದು ಆ ಗಿಫ್ಟ್ ನೀಡಿದ್ದಾರೆ. ಜೊತೆಗೆ ಆರ್ಯವರ್ಧನ್ ನನ್ನನ್ನು ಮಗ, ಕಂದಾ ಎಂದು ಮಾತನಾಡುವಾಗ ನನಗೆ ತಂದೆ ಕರೆದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ. ಗಿಫ್ಟ್ ತೆಗೆದುಕೊಳ್ಳಲು ಹೋದಾಗ ಆರ್ಯವರ್ಧನ್ ತುಂಬಾ ಖುಷಿಪಟ್ಟಿದ್ದಾರೆ. ಜೀವನದಲ್ಲಿ ರೂಪೇಶ್ ಬರೆದಿರುವ ಹಾಡನ್ನು ಯಾವತ್ತಿಗೂ ಮರೆಯಲ್ಲ. ಇವನು ಬರೆದಿರುವ ಹಾಡನ್ನು ಬೆಳ್ಳಿಯಲ್ಲಿ ಬರೆಸುತ್ತೀನಿ. ಬೆಳ್ಳಿ ಫ್ರೇಮ್ ಹಾಕಿ ಮನೆಯಲ್ಲಿ ಇಟ್ಟುಕೊಳ್ಳುತ್ತೀನಿ ಎಂದ ಗುರೂಜಿ ಮತ್ತೊಮ್ಮೆ ಆ ಪ್ರೀತಿಗಾಗಿ ಆ ಹಾಡನ್ನು ಹಾಡು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಎಲ್ಲರ ಅನುಮತಿ ಪಡೆದ ರೂಪೇಶ್ ಮತ್ತೊಮ್ಮೆ ಆ ಬ್ರಹ್ಮ ಬರೆದ ಬರಹ ನೀನು ಎಂಬ ಹಾಡನ್ನು ಹಾಡಿದ್ದಾರೆ.