ಬೆಂಗಳೂರು: ನನಗೆ ಬೇಸರ ಆಗಿದ್ದು ಸತ್ಯ. ಸಚಿವ ಸ್ಥಾನ ನೀಡುವಾಗ ನಮ್ಮ ಜಿಲ್ಲೆಯನ್ನು ಪರಿಗಣಿಸಿಲ್ಲ. ನನಗೂ ಆದ್ಯತೆ ನೀಡಿಲ್ಲ ಅನ್ನೋ ಬೇಸರ ಇದೆ. ಹಾಗಂತ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಹಿರೆಕೇರೂರು ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ ಸಿದ್ದರಾಮಯ್ಯರನ್ನ ಭೇಟಿಮಾಡಿ ನನ್ನ ನೋವನ್ನ ಹೇಳಿಕೊಂಡಿದ್ದೇನೆ. ನಾನು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು. ನಾನು ಎಲ್ಲೂ ಹೋಗಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಈಗ ನನ್ನ ಕ್ಷೇತ್ರ ಹಿರೆಕೇರೂರಿಗೆ ಹೋಗುತ್ತಿದ್ದೇನೆ. ಸೋಮವಾರದಿಂದ ಅಧಿವೇಶನಕ್ಕೆ ಬರುತ್ತೇನೆ ಎಂದು ಸ್ಪಷ್ಟ ಪಡಿಸಿದರು.
Advertisement
Advertisement
ಆಪರೇಷನ್ ಕಮಲದ ಬೆಳವಣಿಗೆಗಳಲ್ಲಿ ಕೊನೆಯ ಘಳಿಗೆಯಲ್ಲಿ ಬಿಸಿ ಪಾಟೀಲ್ ಅವರು ಕಮಲ ಪಾಳಯ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದ್ರೆ ಈ ಬೆಳವಣಿಗೆ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಾನು ಯಾವುದೇ ಕಾರಣಕ್ಕೂ ಮುಂಬೈಗೆ ಹೋಗಿಲ್ಲ ಎಂದು ಸ್ವತಃ ಬಿಸಿ ಪಾಟೀಲ್ ಅವರೇ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದರು.
Advertisement
ಪಬ್ಲಿಕ್ ಟಿವಿ ಪ್ರತಿನಿಧಿ ಜೊತೆ ಬಿಸಿ ಪಾಟೀಲ್ ಮಾತುಕತೆ:
ಪ್ರತಿನಿಧಿ: ತಾವು ಬೇಸರವಾಗಿದ್ದು ಏನಕ್ಕೆ?
ಬಿಸಿ ಪಾಟೀಲ್: ಏನ್ ಬೇಸರಾಗ್ತಾ ಇರುತ್ತಾಲ್ಲ ಏನ್ಮಡೋದು
ಪ್ರತಿನಿಧಿ: ತಾವು ಮುಂಬೈಗೆ ಹೋಗಿದ್ರಿ ಅಂತಾ ಮಾಹಿತಿ ಇತ್ತು
ಬಿಸಿ ಪಾಟೀಲ್: ಇಲ್ಲ ಇಲ್ಲ ಅದು ಸುಳ್ಳು
ಪ್ರತಿನಿಧಿ: ಸಿದ್ದರಾಮಯ್ಯರೊಂದಿಗೆ ಏನ್ ವಿಷಯ ಚರ್ಚೆ ಆಯ್ತು
ಬಿಸಿ ಪಾಟೀಲ್: ನಿನ್ನೆ ಮೀಟಿಂಗ್‍ಗೆ ಬರಕ್ಕಾಗಲ್ಲ ಅಂತಾ ಹೇಳಿದ್ದೆ ಅದಕ್ಕೆ ಭೇಟಿ ಆಗು ಅಂತಾ ಹೇಳಿದ್ರು. ನಿನ್ನೆ ರಾತ್ರಿ ಅವರು ಮೈಸೂರಿನಿಂದ ಬರೋದು ಲೇಟ್ ಆಯ್ತು ಅದಕ್ಕೆ ನಿನ್ನೆ ಭೇಟಿಯಾಗೋಕೆ ಹೇಳಿದ್ರು. ಅದ್ರೆ ಸಿದ್ದರಾಮಯ್ಯ ಲೇಟಾಗಿ ಬಂದಿದ್ರಿಂದ ಭೇಟಿ ಮಾಡಲು ಆಗಿರಲಿಲ್ಲ. ಅವರು ಡೆಲ್ಲಿಗೆ ಹೊರಟಿದ್ರು ಭೇಟಿಯಾದೆ ಅಷ್ಟೇ.
Advertisement
ಪ್ರತಿನಿಧಿ: ಅಲ್ಲ ಸರ್ ಅಗ್ಲೇ ನೀವು ಬೇಸರ ಆಗಿದೆ ಅಂತಾ ಹೇಳಿದ್ರಿ ಯಾಕೆ ಏನಾಯ್ತು
ಬಿಸಿ ಪಾಟೀಲ್: ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಕೊಡಲಿಲ್ಲ ಅವಕಾಶ ಇದ್ದಾಗ ನಮ್ಮಗೆ ಮಂತ್ರಿಗಿರಿಯನ್ನ ಸಹ ಕೊಡಲಿಲ್ಲ ಯಾಕೋ ಅದಕ್ಕೆ ಬೇಜರಾಗಿತ್ತು
ಪ್ರತಿನಿಧಿ: ಹಾಗಾದ್ರೆ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಬಿಸಿ ಪಾಟೀಲ್ ಅವರು ಮುಂಬೈಗೆ ಹೋಗಿದ್ದಾರೆ ಅಂತಾ ಇತ್ತು ಅದೆಲ್ಲ ಸುಳ್ಳು
ಬಿಸಿ ಪಾಟೀಲ್ : ಹೌದು ಸರ್
ಪ್ರತಿನಿಧಿ: ಹಾಗಾದ್ರೆ ಸೋಮವಾರದಿಂದ ಅಧಿವೇಶನಕ್ಕೆ ಹಾಜರಾಗ್ತಿರ
ಬಿಸಿ ಪಾಟೀಲ್: ಹೌದು ಈಗ ಊರಿಗೆ ಹೊರಟಿದ್ದೇನೆ ಸೋಮವಾರ ಅಧಿವೇಶನಕ್ಕೆ ಬರುತ್ತೇನೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv