ವಿಜಯಪುರ: ಐ ಆಮ್ ಪ್ರೌಡ್ ಟು ಬಿ ಹಿಂದೂ, ತಿಲಕ್ ಇಸ್ ಮೈ ರೈಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುಖಾಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ತಿಲಕ ಹೇಳಿಕೆ ಸದ್ಯ ಭಾರೀ ಸುದ್ದಿಯಲ್ಲಿದೆ. ಕುಂಕುಮಧಾರಿಯನ್ನು ಕಂಡರೆ ಭಯ ಹುಟ್ಟದೆ, ಗೌರವ ಹುಟ್ಟುತ್ತಾ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಿಜೆಪಿ ನಾಯಕರು ಹಾಗೂ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬಿಜೆಪಿಯಿಂದ ತಿಲಕ ಅಭಿಯಾನವೇ ಶುರುವಾಗಿಬಿಟ್ಟಿದೆ. ಒಬ್ಬರ ಮೇಲ್ಲೊಬ್ಬರು ಬಿಜೆಪಿ ನಾಯಕರು ತಿಲಕ ವಿಚಾರಕ್ಕೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುತ್ತ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತಿಲಕ ಅಭಿಯಾನ
Advertisement
https://www.facebook.com/basanagouda.patilyatnal/posts/2056106134484929
Advertisement
ಈ ನಡುವೇ ಯತ್ನಾಳ್ ಅವರು ತಾವು ತಿಲಕ ಇಟ್ಟುಕೊಂಡಿರುವ ಫೋಟೋವೊಂದನ್ನು ಫೇಸ್‍ಬುಕ್‍ನಲ್ಲಿ ಹಾಕಿ “I’m proud to be Hindu. Tilak is my right” ಎಂದು ಬರೆದು ಪೋಸ್ಟ್ ಮಾಡಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
Advertisement
ತಿಲಕ ಕಂಡರೆ ಭಯವಾಗುತ್ತೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯರಿಗೆ ಒಂದು ಡಬ್ಬಿ ಕುಂಕುಮ ಹಾಗೂ ತಿಲಕದ ಮಹತ್ವದ ಪುಸ್ತಕವನ್ನು ಮಹಿಳೆಯರು ಮಾಜಿ ಸಿಎಂಗೆ ಕೊರಿಯರ್ ಮಾಡಿದ್ದಾರೆ. ಸಿದ್ದರಾಮಯ್ಯನವರ ಪತ್ನಿಗೆ ಕೇಳಿದರೆ ಕುಂಕುಮದ ಮಹತ್ವ ಹೇಳುತ್ತಾರೆ. ಅವರು ತಿಲಕ ಹಾಕಲ್ಲವೆ ಎಂದು ಟಾಂಗ್ ಕೊಟ್ಟಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿ ವಿತ್ ತಿಲಕ ಕೂಡ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ:ಕುಂಕುಮಧಾರಿಯನ್ನ ನೋಡಿದಾಗ ಭಯ ಹುಟ್ಟದೆ, ಗೌರವ ಹುಟ್ಟುತ್ತಾ: ಸಿದ್ದರಾಮಯ್ಯ ಪ್ರಶ್ನೆ
Advertisement
ಕುಂಕುಮ ನಾಮ, ಕಾವಿ ಬಟ್ಟೆಗಳೆಲ್ಲ ಭಾರತೀಯ ಧಾರ್ಮಿಕ ಪರಂಪರೆಯ ಭಾಗ, ಅದಕ್ಕೊಂದು ಪಾವಿತ್ರ್ಯ ಇತ್ತು.
ಆದರೆ ಯಾವಾಗ #BJP4India ನಾಯಕರೆಲ್ಲ ಇವುಗಳನ್ನೆಲ್ಲ ರಾಜಕೀಯಕ್ಕೆ ದುರುಪಯೋಗ ಮಾಡಿಕೊಳ್ಳಲು ಹೊರಟರೋ, ಅದ ನಂತರ ಕುಂಕುಮ,ಕಾವಿ ಹಾಕಿಕೊಂಡವರನ್ನು ಜನತೆ ಸಂಶಯ-ಭಯದಿಂದ ನೋಡುವಂತಾಗಿದೆ.@INCKarnataka
— Siddaramaiah (@siddaramaiah) March 6, 2019
ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಟ್ವಿಟ್ಟರಿನಲ್ಲಿ, ಹಣೆಗೆ ತಿಲಕವಿಟ್ಟು ಸೆಲ್ಫಿ ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿ ಅದಕ್ಕೆ, “ತಿಲಕಕ್ಕೂ, ರಾಜಕೀಯಕ್ಕೂ ಸಂಬಂಧವಿಲ್ಲ. ಅದು ಭಾರತ ಸಂಸ್ಕೃತಿಯ ಭಾಗ, ತಿಲಕದ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಬರೆದುಕೊಂಡಿದ್ದರು.
https://twitter.com/ShobhaBJP/status/1103205304840278016?ref_src=twsrc%5Etfw%7Ctwcamp%5Etweetembed%7Ctwterm%5E1103205304840278016&ref_url=https%3A%2F%2Fpublictv.jssplgroup.com%2Fbjp-starts-tilak-abhiyana-against-siddaramaiah%2Famp
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv