– ಸಿಎಂ ಇಬ್ರಾಹಿಂ ವಿದೂಷಕ
ಮೈಸೂರು: ಮುಸ್ಲಿಂ ಮತಗಳು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಬಾರದಿತ್ತು. ಅವರ ಮತ ಬೇಡ ಇವರ ಮತ ಬೇಡ ಅನ್ನಬಾರದು ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಈಶ್ವರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದ್ರು.
ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೋಸ್ತಿ ವರ್ಸಸ್ ಬಿಜೆಪಿ ಆಗಬೇಕಿತ್ತು. ದೋಸ್ತಿ ವರ್ಸಸ್ ದೋಸ್ತಿ ಆಗಿದೆ ಎಂದು ವ್ಯಂಗ್ಯವಾಡಿದ್ರು.
Advertisement
Advertisement
ರಾಜ್ಯದಲ್ಲಿ ದೋಸ್ತಿಗಳು ಹೇಗಿದ್ದಾರೆ ಎಂದು ಗೊತ್ತಿದೆ. ಮಂಡ್ಯದಲ್ಲಿ ದೋಸ್ತಿ ವರ್ಸಸ್ ಸುಮಲತಾ ಆಗಿದೆಯಾ ಎಂದು ಪ್ರಶ್ನಿಸಿದ್ರು. ಅಲ್ಲದೆ ಎಂಟು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ನೀವು ಹೇಗೆ ಅಧಿಕಾರ ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಎಷ್ಟರ ಮಟ್ಟಿಗೆ ನಿಮ್ಮ ನಡುವೆ ಸಮನ್ವಯ ಇದೆ ಎಂಬುದೂ ಗೊತ್ತಿದೆ ಎಂದು ಹೇಳಿದ್ರು.
Advertisement
ದಾವೂದ್ ಇಬ್ರಾಹಿಂಗೂ ಸಿ.ಎಂ. ಇಬ್ರಾಹಿಂಗೂ ಏನಾದರೂ ವ್ಯತ್ಯಾಸ ಇದೆಯಾ ಎಂದು ಪ್ರಶ್ನಿಸಿದ ಶ್ರೀನಿವಾಸ್ ಪ್ರಸಾದ್, ಇಬ್ರಾಹಿಂ ಒಬ್ಬ ಕ್ರಿಮಿನಲ್ ಪಾಲಿಟಿಷಿಯನ್. ಇಬ್ರಾಹಿಂ ಒಬ್ಬ ವಿದೂಷಕನಾಗಿದ್ದಾರೆ. ದಾವೂದ್ ಇಬ್ರಾಹಿಂ ಅದರೂ ಅಂಡರ್ ವಲ್ರ್ಡ್ ಡಾನ್. ಆದರೆ ಇಬ್ರಾಹಿಂ ಯಾರು ಅಂದ್ರೆ ಸಿದ್ದರಾಮಯ್ಯ ಆಸ್ಥಾನದ ಒಬ್ಬ ವಿದೂಷಕ ಎಂದು ಸಿಎ.ಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದ್ರು.
Advertisement
ಅನಂತ್‍ಕುಮಾರ್ ಹೆಗ್ಡೆ ಸಂವಿಧಾನದದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತಾಡಿದ್ದರು. ಆ ಮಾತಿಗೆ ಅವರು ಸಂಸತ್ ನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ರು.