ದಾವಣಗೆರೆ: ನಾನು ಯಾರನ್ನು ಕೆಣಕಲು ಹೋಗುವುದಿಲ್ಲ, ಆದರೆ ಅವರಾಗಿಯೇ ನನ್ನನ್ನು ಕೆಣಕಲು ಯತ್ನಿಸುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ಡಾ.ಮಹಾಂತ ಸ್ವಾಮಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಜೀವನದುದ್ದಕ್ಕೂ ಸಂಘರ್ಷದ ಹಾದಿಯಲ್ಲೇ ಬೆಳೆದು ಬಂದಿದ್ದೇನೆ. ಮಹಿಳೆಯರು ಭಾವನಾ ಜೀವಿಗಳು. ಆದರೂ ಸಹ ನಾನು ರಾಜಕೀಯ ಕ್ಷೇತ್ರದಲ್ಲಿ ದಿಟ್ಟತನದಿಂದ ನಡೆಯುತ್ತಿದ್ದೇನೆ. ಅಲ್ಲದೇ ಕೆಲವರು ನೀನು ಬಹಳ ಸ್ಪೀಡ್ ಆಗಿ ಹೋಗುತ್ತಿದ್ದಿಯಾ ಅಂತಾ ಬುದ್ದಿವಾದವನ್ನು ಹೇಳುತ್ತಿದ್ದಾರೆ. ನಾನು ಸುಮ್ಮನೇ ಯಾರನ್ನು ಕೆಣಕುವುದಿಲ್ಲ. ಆದರೆ ಅವರಾಗಿಯೇ ನನ್ನನ್ನು ಕೆಣಕುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇತಿಹಾಸದಲ್ಲಿ ಕಾಂಗ್ರೆಸ್ ಒಂದು ಬಾರಿಯೂ ಗೆದ್ದಿರಲಿಲ್ಲ. ಪಂಚಮಸಾಲಿ ಸಮಾಜ ಕಲಿಸಿದ ಆದರ್ಶದಿಂದ ಮರಾಠರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಗೆದ್ದು ತೋರಿಸಿದ್ದೇನೆ. ಈ ಸಮಾಜಕ್ಕೆ ಯಾವತ್ತು ಮೋಸ ಮಾಡುವುದಿಲ್ಲ. ಅಲ್ಲದೇ ಕೂಡಲ ಸಂಗಮ ಪೀಠವು ಈ ಪಂಚಮಸಾಲಿ ಪೀಠ ಒಂದಾಗಬೇಕು. ಇತರ ಸಮಾಜವನ್ನು ಒಗ್ಗೂಡಿ ಜೊತೆಯಲ್ಲಿ ಸಾಗೋಣವೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv