ಬೆಂಗಳೂರು: ಮೈತ್ರಿ ಸರ್ಕಾರ ರಚನೆಗೊಂಡಾಗ ಸಂಪುಟ ಸೇರಿಕೊಂಡಿದ್ದ ಬಿಎಸ್‍ಪಿ (ಬಹುಜನ ಸಮಾಜ ಪಕ್ಷ) ಶಾಸಕ ಎನ್.ಮಹೇಶ್ ದಿಢೀರ್ ಅಂತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಅಂದು ಮೈತ್ರಿ ಸಂಪುಟದಲ್ಲಿ ಸಚಿವನಾಗಿ ಇರಲಾರೆ, ಬಾಹ್ಯವಾಗಿ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಎನ್.ಮಹೇಶ್ ಬಿಎಎಸ್‍ಪಿ ತೊರೆದು ಬಿಜೆಪಿ ಸೇರಲು ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎನ್.ಮಹೇಶ್, ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಬೆಂಬಲ ನೀಡಲ್ಲ. ಹಾಗಾಗಿ ಬಿಜೆಪಿ ಸೇರುವ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
Advertisement
ಭಾನುವಾರ ರಾತ್ರಿ ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆಯಲ್ಲಿ ಎನ್.ಮಹೇಶ್ ಭಾಗಿಯಾಗಿದ್ದರು. ಆದರೆ ಸಭೆಯಿಂದ ಅರ್ಧದಿಂದಲೇ ಎನ್.ಮಹೇಶ್ ಹೊರ ಬಂದಿದ್ದರು.