ಮುಂಬೈ: ಬಾಲಿವುಡ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ತಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಟೀಕಿಸುತ್ತಿರುವವರ ಕುರಿತು ಮಲೈಕಾ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಹಿಳೆಯರು ಯಾವಾಗಲೂ ಒಂದು ಬೌಂಡರಿಯಲ್ಲಿ ಬದುಕಬೇಕು. ಒಂದು ವೇಳೆ ಮಹಿಳೆಯವರು ಬೌಂಡರಿ ಬಿಟ್ಟು ಬಂದರೆ ಜನರು ಅವರನ್ನು ನಿಂದಿಸುತ್ತಾರೆ. ಆದರೆ ನೀವು ಬದುಕಿ, ನಮ್ಮನ್ನು ಬದುಕಲು ಬಿಡಿ ಎಂದು ಈ ಮೂಲಕ ಕೇಳುಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದರು. ಇದನ್ನೂ ಓದಿ: ಕೂದಲ ರಕ್ಷಣೆಗಾಗಿ ಮನೆಯಲ್ಲಿ ತಯಾರಿಸಿ ಮನೆ ಮದ್ದು
ನನ್ನ ಜೀವನ ನನ್ನ ಆಯ್ಕೆಯಾಗಿರುತ್ತೆ. ಡ್ರೆಸ್ಸಿಂಗ್ ಎಂಬುದು ನನ್ನ ವೈಯಕ್ತಿಕ ಆಯ್ಕೆಯಾಗಿದೆ. ನೀವು ಬೇರೆ ರೀತಿ ಯೋಚಿಸಬಹುದು. ಅದೇ ರೀತಿ ನಾನು ಮಾಡಬೇಕು ಎಂದು ಬಲವಂತಪಡಿಸುವುದು ಸರಿಯಲ್ಲ. ಇದು ನನ್ನ ಆಯ್ಕೆಯಾಗಿದೆ. ನನ್ನ ವೈಯಕ್ತಿಕ ಆಯ್ಕೆಗಳನ್ನೆಲ್ಲ ಜಡ್ಜ್ ಮಾಡಬೇಡಿ ಎಂದು ಹೇಳಿದರು.
ನಾನು ಆರಾಮಾಗಿದ್ದೇನೆ. ನಾನು ಮೂರ್ಖಿಯಲ್ಲ. ನನಗೆ ಯಾವುದು ಚೆನ್ನಾಗಿ ಕಾಣುತ್ತದೆ ಎಂದು ನನಗೆ ತಿಳಿದಿದೆ. ಯಾವುದು ಚೆನ್ನಾಗಿ ಕಾಣಿಸುವುದಿಲ್ಲ ಎಂಬುದು ನನಗೆ ತಿಳಿದಿದೆ. ನನ್ನ ಆಯ್ಕೆಗಳ ಬಗ್ಗೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ನನ್ನ ಬಣ್ಣ, ನನ್ನ ದೇಹ, ನನ್ನ ವಯಸ್ಸಿನಿಂದ ನಾನು ಆರಾಮಾಗಿದ್ದೇನೆ. ಜೀವನ ತುಂಬಾ ಸರಳವಾಗಿದೆ, ಆದರೆ ಅದನ್ನು ಮತ್ತೆ ಕಠಿಣ ಮಾಡಿಕೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ಮಲೈಕಾ ಡ್ಯಾನ್ಸರ್ ಆಗಿದ್ದು, ಬಾಲಿವುಡ್ ಚೈಯ್ಯಾ ಚೈಯಾ, ಮಾಹಿ ವೆ, ಕಾಲ್ ಧಮಾಲ್ ಮತ್ತು ಮುನ್ನಿ ಬದ್ನಾಮ್ ಹುಯಿ ಹಾಡುಗಳಲ್ಲಿ ಹೆಜ್ಜಿ ಹಾಕಿ ಎಲ್ಲಕಡೆ ಸದ್ದು ಮಾಡಿದ್ದರು. ಪ್ರಸ್ತುತ ಖಾಸಗಿ ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.