ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ನೀಡಿದ್ರೆ ನಿಬಾಯಿಸ್ತೇನೆ: ಎಂ.ವೈ.ಪಾಟೀಲ್

Public TV
1 Min Read
vlcsnap 2018 04 01 14h15m28s210

ಕಲಬುರಗಿ: ಸಚಿವ ಸ್ಥಾನಕ್ಕಾಗಿ ಒತ್ತಾಯಿಸಲ್ಲ, ಹಿರಿಯ ಶಾಸಕನೆಂದು ನೀಡಿದರೆ ನಿಬಾಯಿಸುತ್ತೇನೆ ಎಂದು ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಟ್ಟರೆ ಸಮರ್ಪಕವಾಗಿ ನಿಬಾಯಿಸುತ್ತೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿರುವ ಕಾರಣದಿಂದ ನಾನು ಸಚಿವ ಸ್ಥಾನಕ್ಕೆ ಒತ್ತಡ ಹೇರುವುದಿಲ್ಲ ಎಂದು ತಿಳಿಸಿದ್ದಾರೆ.

ನಾನು ದಶಕಗಳ ಕಾಲ ಬಿಜೆಪಿಗಾಗಿ ಶ್ರಮಿಸಿದ್ದೆ, ನನಗೆ ಗೊತ್ತಾಗದಂತೆ ರಾತ್ರೋ ರಾತ್ರಿ ಮಾಲೀಕಯ್ಯ ಗುತ್ತೇದಾರ್‍ಗೆ ಟಿಕೆಟ್ ನೀಡಿದ್ರು. ಬಿಜೆಪಿಗೆ ಹಾಗೂ ಮಾಲೀಕಯ್ಯ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ನಾನು ಬಿಜೆಪಿಗೆ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ, ಮತ್ತೇ ಅವರು ನನ್ನನ್ನು ಸಂಪರ್ಕಿಸಲು ಬಂದರೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

ಮಾಲೀಕಯ್ಯ ಪ್ರಚಾರಕ್ಕೆ ಹೋಗಿರುವಲ್ಲಿ ಬಿಜೆಪಿ ಸೋತಿದೆ, ಅವರು ದುರಂಹಕಾರ ಬಿಟ್ಟು ಅಭಿವೃದ್ಧಿಗೆ ಶ್ರಮಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *