ದಾವಣಗೆರೆ: ಈಗ ಟೀಕೆ ಮಾಡೋದು ಒಂದು ಸ್ಟಂಟ್ ಆಗಿದೆ. ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಮಹದಾಯಿ ವಿಚಾರವನ್ನು ಇತ್ಯರ್ಥ ಮಾಡಲಾಗುವುದು ಅಂತ ಪ್ರಧಾನಿಗಳು ಶನಿವಾರ ಗದಗ್ ನಲ್ಲಿ ತಿಳಿಸಿದ್ದಾರೆ. ಆದ್ರೆ ಸಿಎಂ ಮಾತ್ರ ಪ್ರಧಾನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆಯನ್ನು ನೀಡ್ತಿದ್ದಾರೆ ಅಂತಾ ತಿರುಗೇಟು ಕೊಟ್ಟಿದ್ದರು. ಈ ಸಂಬಂಧ ಯಡಿಯೂರಪ್ಪ, ಸಿಎಂ ತಿರುಗೇಟಿಗೆ ಏಕವಚನದಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು
ಗದಗ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡ್ತಿದೆ. ಈ ಹಿಂದೆ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ರೂ ಮಹದಾಯಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಈ ವಿವಾದವನ್ನು ಬಗೆಹರಿಸುವ ಸಂಕಲ್ಪ ಮಾಡಿದೆ ಅಂತ ಹೇಳಿದ್ರು. ಇದನ್ನೂ ಓದಿ: ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ