– ಮಾಸಿಕ ಸಭೆಯಲ್ಲಿ ಮೇಯರ್ ಪಕ್ಕ ಕೂರಲ್ಲ: ಉಪಮೇಯರ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೋಸ್ತಿಗಳ ಮಧ್ಯೆ ವೈಮನಸ್ಸಿನ ಬಿಸಿ ಈಗ ಬೆಂಗಳೂರು ಮಹಾನಗರ ಪಾಲಿಕೆಗೂ ತಟ್ಟಿದೆ.
ಮೇಯರ್ ಗಂಗಾಬಿಕೆ ಹಾಗೂ ಉಪ ಮೇಯರ್ ಭದ್ರೇಗೌಡ ಮಧ್ಯೆ ಮತ್ತೆ ಶೀತಲ ಸಮರ ಶುರುವಾಗಿದೆ. ಹೀಗಾಗಿ ಪಾಲಿಕೆಯ ಮಾಸಿಕ ಸಭೆಯಲ್ಲಿ ಮೇಯರ್ ಅವರ ಪಕ್ಕದ ಕುರ್ಚಿಯಲ್ಲಿ ಕೂರದಿರಲು ಭದ್ರೇಗೌಡ ಅವರು ತೀರ್ಮಾನಿಸಿದ್ದಾರೆ.
Advertisement
Advertisement
ನಾಗಪುರ ವಾರ್ಡಿನಲ್ಲಿ ಪಾಲಿಕೆಯ ಕಲ್ಯಾಣ ಕಾರ್ಯಕ್ರಮದ ಅಡಿ 50 ಮನೆಗಳ ನಿರ್ಮಾಣವಾಗಿತ್ತು. ಹೀಗಾಗಿ ಫಲಾನುಭವಿಗಳಿಗೆ ಮನೆಗಳ ಕೀಲಿ ಕೈ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಮೇಯರ್ ಗಂಗಾಬಿಕೆ ಅವರಿಗೆ ಆಮಂತ್ರಣ ನೀಡಲಾಗಿತ್ತು. ಆದರೆ ಅವರು ಗೈರಾಗಿದ್ದು ಉಪ ಮೇಯರ್ ಭದ್ರೇಗೌಡ ಅವರ ಕೋಪಕ್ಕೆ ಕಾರಣವಾಗಿದೆ.
Advertisement
ಕಾರ್ಯಕ್ರಮಕ್ಕೆ ಮೇಯರ್ ಮತ್ತು ಆಡಳಿತ ಪಕ್ಷದ ನಾಯಕರಿಗೆ ಆಮಂತ್ರಣ ನೀಡಿದ್ದೇನೆ. ಆದರೂ ಅವರು ಕಲ್ಯಾಣ ಕಾರ್ಯಕ್ರಮಗಳ ಉದ್ಘಾಟನೆಗೆ ಬಂದಿಲ್ಲ. ಕನಿಷ್ಠ ನಮಗೆ ಬರಲು ಸಾಧ್ಯವಾಗುತ್ತಿಲ್ಲ ಅಂತ ಫೋನ್ ಮಾಡಿ ಹೇಳಬಹುದಿತ್ತು. ಅವರಿಗೆ ಬೆಂಗಳೂರು ಅಭಿವೃದ್ಧಿ ಬಗ್ಗೆ ಕಾಳಜಿಯಿಲ್ಲ. ಮೇಯರ್ ಗಂಗಾಬಿಕೆ, ಆಡಳಿತ ಪಕ್ಷದ ನಾಯಕರು ಪರಿಶಿಷ್ಟ ಜನಾಂಗದ ವಿರೋಧಿಗಳು ಎಂದು ಭದ್ರೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಮಾಸಿಕ ಸಭೆಗೆ ಮೇಯರ್ ಪಕ್ಕದಲ್ಲಿ ಕೂರುವುದಿಲ್ಲ ಎಂದು ಡಿಸಿಎಂ ಪರಮೇಶ್ವರ್ ಅವರಿಗೆ ಹೇಳಿದ್ದೇನೆ. ಅವರು ಹಾಗೆಲ್ಲಾ ಮಾಡಬೇಡಿ, ಮಾಸಿಕ ಸಭೆಗೂ ಮುನ್ನವೇ ನಾನು ಬಂದು ಮನೆಗಳನ್ನು ವೀಕ್ಷಣೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಒಂದು ಅವರು ಮನೆಗಳನ್ನು ವೀಕ್ಷಣೆ ಮಾಡದಿದ್ದರೆ ನಾನು ಮಹಾಪೌರರ ಪಕ್ಕ ಕೂರುವುದಿಲ್ಲ ಎಂದು ಹೇಳಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]