ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ನಾನು ಕೇಳಿಲ್ಲ. ಎರಡನೇ ಸುತ್ತಿನಲ್ಲಿ ಸಚಿವ ಸ್ಥಾನ ಪಡೆಯೋಕೆ ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಅಂತಾ ಮಾಜಿ ಸಚಿವ ಎಂ.ಬಿ.ಪಾಟೀಲ್ ಪಕ್ಷದ ವಿರುದ್ಧವೇ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಿರಿಯ ನಾಯಕ ಅಹಮದ್ ಪಟೇಲ್ ಕರೆ ಮೇರೆಗೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ನನಗಾದ ಅನ್ಯಾಯದ ಬಗ್ಗೆ ಹೇಳಿದ್ದೇನೆ. ಏನು ಮಾತಾಡಿದ್ದೇನೆ ಅಂತ ನಾನು ಮಾಧ್ಯಮಗಳಿಗೆ ಹೇಳೊಲ್ಲ. ಮಾಧ್ಯಮಗಳು ನಾನು ಕೊಟ್ಟ ಹೇಳಿಕೆ ಹಾಕಿ. ಇಲ್ಲವೇ ರಾಹುಲ್ ಗಾಂಧಿ ಮಾತಾಡಿದ್ರೆ ಅದನ್ನ ಹಾಕಿ. ಅದು ಬಿಟ್ಟು ಏನೇನೋ ಸುದ್ದಿ ಹಾಕಬೇಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತೀವ್ರ ಕುತೂಹಲ ಸೃಷ್ಟಿಸಿದೆ ಶಿವರಾಜ್ ಪಾಟೀಲ್, ಎಂ.ಬಿ ಪಾಟೀಲ್ ಭೇಟಿ!
Advertisement
ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನ ಕೇಂದ್ರ ವಾಪಸ್ ಕಳಿಸಿರುವ ವಿಚಾರ ನನಗೇನು ಗೊತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟವನ್ನು ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅವರನ್ನು ಕೇಳಬೇಕು. ಜಾಮದಾರ್ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದು, ಅವರಿಗೆ ಸರಿ ಅನ್ನಿಸಿದ್ದನ್ನ ಮಾಡ್ತಾರೆ. ಕೆಲವು ಸಾರಿ ನಮ್ಮ ಮಾತೇ ಕೇಳೋದಿಲ್ಲ. ಜಾಮದಾರ್ ಬುದ್ಧಿವಂತರು,ಪ್ರಾಮಾಣಿಕ, ಬದ್ಧತೆ ಇರೋ ಮನುಷ್ಯ ಅಂತಾ ಸ್ಪಷ್ಟಪಡಿಸಿದ್ರು.