ಬೆಂಗಳೂರು: ರೇವಣ್ಣರಿಂದ ನನಗೆ ಯಾವುದೇ ಕರೆ ಬಂದಿಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳ ನಡುವೆ ಸಂವಹನ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಬರಬೇಕಾಗಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸುತ್ತಿಲ್ಲ. ನೀರು ಸರಿಯಾಗಿ ಬರದೇ ಇರಲು ದೇವೇಗೌಡರ ಕುಟುಂಬವೇ ಕಾರಣ ಎಂದು ಸಾರ್ವಜನಿಕರ ಆರೋಪವನ್ನು ಆಧಾರಿಸಿ ಪಬ್ಲಿಕ್ ಟಿವಿ ಗುರುವಾರ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಇಂದು ತರಾತುರಿಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಹಾಜರಾಗುವಂತೆ ತಿಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರು ಹಲವು ಬಾರಿ ಪರಮೇಶ್ವರ್ ಅವರಿಗೆ ಕರೆ ಮಾಡಿದ್ದು, ಈ ಕರೆಗಳಿಗೆ ಡಿಸಿಎಂ ಉತ್ತರಿಸದೇ ಮುನಿಸಿಕೊಂಡಿದ್ದರು ಎನ್ನಲಾಗಿದೆ. ಇದನ್ನು ಓದಿ: ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ
Advertisement
Advertisement
ಕರೆ ಸ್ವೀಕರಿಸದ್ದಕ್ಕೆ ಅಸಮಾಧಾನಗೊಂಡ ರೇವಣ್ಣ ಅವರು ಇಂದು ಸಭೆಯ ನಡುವೆಯೇ ಪರಮೇಶ್ವರ್ ಅವರಿಗೆ ಕರೆ ಮಾಡಿ, “ಅಣ್ಣಾ ನಾನು ನಿಮಗೆ ನಿನ್ನೆ ಮೂರ್ನಾಲ್ಕು ಬಾರಿ ಫೋನ್ ಮಾಡಿದ್ದೆ, ನೀವು ರಿಸೀವ್ ಮಾಡಲೇ ಇಲ್ಲ. ಬೇಕಾದರೆ ನಿಮ್ಮವರನ್ನು ಕೇಳಿ ನೋಡಿ” ಎಂದು ನಯವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ತುಮಕೂರಿಗೆ ಹೇಮಾವತಿ ನೀರು ಹರಿಸಲು ಹಸ್ತಕ್ಷೇಪ – ದೇವೇಗೌಡ್ರ ಕುಟುಂಬದ ವಿರುದ್ಧ ಜನ ಆರೋಪ
Advertisement
ರೇವಣ್ಣ ಫೋನ್ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಪರಮೇಶ್ವರ್, ನನಗೆ ರೇವಣ್ಣನವರಿಂದ ಯಾವುದೇ ಫೋನ್ ಬಂದಿಲ್ಲ. ಇಂದು ಸಭೆ ಇದೆ ಎನ್ನುವುದೇ ನನಗೆ ತಿಳಿದಿಲ್ಲ ಎಂದು ಉತ್ತರಿಸಿದರು.
Advertisement
ಪರಮೇಶ್ವರ್ ಅವರೇ ನನಗೆ ಫೋನ್ ಕರೆ ಬಂದಿಲ್ಲ ಎಂದು ಹೇಳಿದ ಮೇಲೆ ರೇವಣ್ಣ ಸಭೆ ಮಧ್ಯದಲ್ಲೇ ಕರೆ ಮಾಡಿದ್ದು ಯಾರಿಗೆ ಎನ್ನುವ ಪ್ರಶ್ನೆ ಎದ್ದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv