ಚಿಕ್ಕಮಗಳೂರು: ನನ್ನನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುತ್ತೇನೆ ಅಂದ್ರು ನಾನು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂದು ಶೃಂಗೇರಿ ಕಾಂಗ್ರೆಸ್ ಟಿ.ಡಿ.ರಾಜೇಗೌಡ ಹೇಳಿದ್ದಾರೆ.
ಬಿಜೆಪಿ ಅವರು ಎಲ್ಲ ಅಧಿಕಾರ, ಹಣ ಕೊಡುತ್ತೇನೆ ಎಂದು ಆಮೀಷ ಒಡ್ಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಖುದ್ದಾಗಿ ಕರೆ ಮಾಡಿ ನನ್ನನ್ನು ಸಂಪರ್ಕಿಸಿದ್ದಾರೆ. ನನಗೆ ಪರಿಚಯಸ್ಥರ ಮೂಲಕವೂ ಪಕ್ಷ ತೊರೆಯುವಂತೆ ಹೇಳಿಸುತ್ತಿದ್ದಾರೆ. ಆದ್ರೆ ಎಂದಿಗೂ ನಾನು ಕಾಂಗ್ರೆಸ್ ಪಕ್ಷ ತೊರೆಯಲ್ಲ ಎಂದು ಟಿ.ಡಿ.ರಾಜೇಗೌಡ ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಶಾಸಕಾಂಗದ ಸಭೆಗೆ ತೆರಳಲು ನಾಲ್ಕು ಗಂಟೆ ತಡವಾಗಿದ್ದರಿಂದ ನಾನು ಸುದ್ದಿಯಲ್ಲಿದ್ದೇನೆ. ನಾನು ಯಾವತ್ತು ಸುದ್ದಿಯನ್ನು ಮಾಡುವಂತಹ ವ್ಯಕ್ತಿ ಅಲ್ಲ. ಕಳೆದ 34 ವರ್ಷಗಳಲ್ಲಿ ಆಗದಷ್ಟು ದೊಡ್ಡ ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ಸಾಕಷ್ಟು ಪ್ರಾಣಹಾನಿ, ಸಾವಿರ ಕೋಟಿಗೂ ಅಧಿಕ ಬೆಳೆಹಾನಿಯಾಗಿದೆ. ಸರ್ಕಾರ ಎಲ್ಲ ಹಾನಿಗೂ ಪರಿಹಾರ ನೀಡಿದ್ದು, ಅದನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ನಾನು ಯಾವುದೇ ಗೊಂದಲದ ರಾಜಕಾರಣದಲ್ಲಿ ಇಲ್ಲ ಅಂತಾ ಮಾಧ್ಯಮಗಳಿಗೆ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv