ವಿಜಯಪುರ: ನಮ್ಮಂತಹ ಹೋರಾಟಗಾರರು, ಪ್ರಾಮಾಣಿಕರು, ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಬಾಗಿಲನ್ನು ಬಂದ್ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣೆ ಇಲ್ಲ. ನಮ್ಮಂತಹ ಹೋರಾಟಗಾರರಿಗೆ, ಪ್ರಾಮಾಣಿಕರಿಗೆ, ಹಿಂದುತ್ವ ವಾದಿಗಳಿಗೆ ಇಂದಿನ ರಾಜಕೀಯ ಬಿಜೆಪಿಯಲ್ಲಿ ಪ್ರವೇಶ ಇಲ್ಲ. ಎಲ್ಲ ಕಳ್ಳರು, ದರೋಡೆಕೋರರು, ಭ್ರಷ್ಟರಿಗೆ ಬಿಜೆಪಿ ಬಾಗಿಲು ತೆಗೆಯುತ್ತದೆ. ಹೀಗಾಗಿ ಚುನಾವಣೆಗೆ ಬಾಗಿಲನ್ನು ಮುಚ್ಚಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಾರ್ವಜನಿಕವಾಗಿ ಕಾರಿಗೆ ಅಲ್ಲ, ಅವರ ಮನೆಗೆ ಬೆಂಕಿ ಹಾಕಿಕೊಳ್ಳಬೇಕು – ಕಾಂಗ್ರೆಸ್‍ಗೆ ಆರಗ ತಿರುಗೇಟು
Advertisement
Advertisement
ರಮೇಶ್‌ಕುಮಾರ್ ಹೇಳಿಕೆ ಕುರಿತು ಮಾತನಾಡಿ, ಅವರು ಏನು ಮಾಡಿದ್ದಾರೋ ಅದು ಸತ್ಯವಾಗಿ ಹೊರ ಬಂದಿದೆ. ಈ ವಿಚಾರ ಬೇರೆಯವರ ಬಾಯಲ್ಲಿ ಬರುತ್ತಿತ್ತು. ಆದರೆ ಈಗ ಯಾರು ಆಸ್ತಿ ಮಾಡಿದ್ದಾರೆ, ಅವರ ಬಾಯಿಂದಲೇ ಬಂತು. ಮೊಘಲರು, ಬ್ರಿಟಿಷರು, ನೆಹರೂ ಮನೆತನದಲ್ಲಿ ರಾಹುಲ್ ಗಾಂಧಿವರೆಗೆ ಲೂಟಿ ಮಾಡಿದರು. ಲೂಟಿ ಮಾಡೋದ್ರಲ್ಲೇ ನಮ್ಮ ದೇಶ ನಡೆಯುತ್ತಿದೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
Advertisement
ಕೆರೂರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಭಟ್ಕಳದ ಮಹಿಳೆ ಬುರ್ಕಾದಲ್ಲಿ ಚಾಕು ತಂದು ಇರಿದಿದ್ದಾಳೆ. ಈ ಘಟನೆ ನೋಡಿದರೆ ಭಟ್ಕಳದಲ್ಲಿ ಇನ್ನೂ ಭಯೋತ್ಪಾದನೆಯ ಕುಕೃತ್ಯ ಜೀವಂತವಾಗಿದೆ. ಹಿಂದೂ ಹುಡುಗಿರನ್ನು ಚುಡಾಯಿಸುವುದನ್ನು ತಡೆಯಲು ಹೋದಾಗ ಈ ಘಟನೆ ನಡೆದಿದೆ. ಹಿಂದೂ ಹುಡುಗಿಯರನ್ನು ಚುಡಾಯಿಸುವುದನ್ನು ತಡೆಯಬಾರದಾ? ಹಿಂದೂ ಹುಡುಗಿಯರು, ಮಹಿಳೆಯರ ರಕ್ಷಣೆ ನಮ್ಮ ಹೊಣೆ ಎಂದು ಮಾತನಾಡಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಅಲ್ಲ ಅದು ಸಿದ್ದರಾಮಯ್ಯ ಅವರ ಕೊನೆಗಾಲದ ಉತ್ಸವ: ಲಕ್ಷ್ಮಣ ಸವದಿ ವ್ಯಂಗ್ಯ
Advertisement
ಹಿಂದೂ ಮಹಿಳೆಯರ ರಕ್ಷಣೆ ನಾವೇ ಮಾಡಬೇಕು. ಅದು ನಮ್ಮ ಕರ್ತವ್ಯ. ಮುಸ್ಲಿಂ ಕಿಡಿಗೇಡಿಗಳ ಪುಂಡಾಟಿಕೆ ಇನ್ನು ನಡೆಯೋದಿಲ್ಲ. ಮುಸ್ಲಿಮರ ಗೂಂಡಾಗಿರಿ ನಡೆಯಲ್ಲ. ಹಿಂದೂ ಸಮಾಜ ಜಾಗೃತಿಯಾಗಿದೆ. ಮುಸ್ಲಿಮರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಹುಷಾರಾಗಿರಿ, ನಿಮ್ಮ ಪಾಡಿಗೆ ನೀವಿರಿ ಎಂದು ಎಚ್ಚರಿಸಿದರು.
ಗಲಭೆ, ಕೊಲೆ, ಹಿಂದೂಗಳನ್ನು ಕೆಣಕೋದು ಇನ್ನು ನಡೆಯುವುದಿಲ್ಲ. ಇದಕ್ಕೆ ಹಿಂದೂ ಸಮಾಜ ಉತ್ತರ ಕೊಡುತ್ತೆ ಸಂವಿಧಾನದ ಆಧಾರದ ಮೇಲೆ ದೇಶ ನಡೆಯುತ್ತಿದೆ. ಡಾ.ಬಿ.ಆರ್.ಅಂಬೇಡ್ಕರರ ಸಂವಿಧಾನ ಇದೆ. ಏನೇ ಇದ್ದರೂ ಪ್ರಜಾಪ್ರಭುತ್ವ ಆಧಾರದ ಮೇಲೆ ಧರಣಿ ಮಾಡಿ, ದೂರು ಕೊಡಿ. ಅದನ್ನು ಬಿಟ್ಟು ಚಾಕು, ತಲವಾರ್ ಹಿಡಿದು ಬರೋದಕ್ಕೆ ಇದು ತಾಲಿಬಾನ್ ಅಲ್ಲ ಎಂದು ಸೂಚಿಸಿದರು.