ಮೈಸೂರು: ನನಗೆ ರಾಜಕೀಯ ಆಸಕ್ತಿ ಇಲ್ಲ. ಕಲಾ ಸೇವೆಯಲ್ಲಿ ಮುಂದುವರಿಯುತ್ತೇನೆ ಎಂದು ಅಯೋಧ್ಯೆ ರಾಮಮಂದಿರ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಹೇಳಿದ್ದಾರೆ.
ತವರು ನೆಲ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕೆಲಸವನ್ನ ನಾನು ಶ್ರದ್ಧೆಯಿಂದ ಮಾಡಿದ್ದೇನೆ. ನನಗೆ ಇಷ್ಟೊಂದು ಪ್ರೀತಿ, ಅದ್ದೂರಿ ಸ್ವಾಗತ ಸಿಗುತ್ತೆ ಅಂತಾ ಅಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾರ ಕಣ್ಣನ್ನು ಚಿನ್ನದ ಉಳಿ, ಬೆಳ್ಳಿ ಸುತ್ತಿಗೆಯಲ್ಲಿ ಮಾಡಿದ್ದೇನೆ: ಶಿಲ್ಪಿ ಅರುಣ್ ಯೋಗಿರಾಜ್
- Advertisement
ಯುವಕರು ಕುಲಕಸುಬು ನಂಬಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳಬಹುದು. ಅದಕ್ಕೆ ನಾನೇ ಉದಾಹರಣೆ. ರಾಜಕೀಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಾಜಕೀಯಕ್ಕೆ ಬರುವ ಆಸಕ್ತಿಯೂ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
- Advertisement
ಬೆಂಗಳೂರಿನಲ್ಲಿ ನನ್ನನ್ನು ನೋಡಲು ತುಂಬಾ ಜನ ಬಂದಿದ್ದರು. ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಮೈಸೂರಿಗೆ ಬರುತ್ತಿದ್ದಂತೆ ಅರಮನೆಗೆ ಭೇಟಿ ನೀಡಿದ್ದೆ. ಯದುವೀರ್ ಅವರನ್ನು ಮಾತನಾಡಿಸಿ ಬಂದಿದ್ದೇನೆ. ಅವರೊಂದಿಗೆ ನನ್ನ ಅನುಭವ ಹೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಕೆತ್ತಲು ಆಯ್ಕೆಯಾಗಿದ್ದು ಹೇಗೆ?- ಶಿಲ್ಪಿ ಅರುಣ್ ಯೋಗಿರಾಜ್ ವಿವರಿಸಿದ್ದು ಹೀಗೆ
ಕಲೆ ಬೆಳೆಯಲು ಮಹಾರಾಜರ ಕೊಡುಗೆ ಅಪಾರವಾಗಿದೆ. ನಮ್ಮ ರಾಜಗುರು ಶಿಲ್ಪಿ ಸಿದ್ದಲಿಂಗಸ್ವಾಮಿ ಅವರಿಗೆ ಮೈಸೂರು ಮಹಾರಾಜರು ಆಶ್ರಯ ಕೊಟ್ಟಿದ್ದರು. ನಾಳೆ ಸುತ್ತೂರು ಸ್ವಾಮೀಜಿ ಅವರನ್ನು ಭೇಟಿ ಆಗುತ್ತೇನೆ. ಅದಕ್ಕಾಗಿ ಸ್ವಾಮೀಜಿ ಅವರ ಸಮಯ ಕೇಳಿದ್ದೇನೆ. ಮಧ್ಯಾಹ್ನ ನಮ್ಮೂರಿನಲ್ಲಿರುವ ತಂದೆಯವರ ಸಮಾಧಿ ಬಳಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.