ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? – ಆಪ್ತರ ಬಳಿ ಸಿಎಂ ಮನದ ಮಾತು

Public TV
1 Min Read
CM Siddaramaiah

ಬೆಂಗಳೂರು: ನಾನು ಆಗಲೇ ಹೋಗಿಲ್ಲ, ಈಗ ಯಾಕೆ ಹೋಗಲಿ? ರಾಜಕೀಯದ ಕಡೇ ಕಾಲಘಟ್ಟದಲ್ಲಿ ಇರುವಾಗ ರಾಷ್ಟ್ರ ರಾಜಕಾರಣಕ್ಕೆ (National Politics) ಯಾಕೆ ನಾನು ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಮನದಾಳದ ಮಾತನ್ನು ಆಡಿದ್ದಾರೆ.

ಸಿದ್ದರಾಮ್ಯಯ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ಸುದ್ದಿಗಳಿಗೆ ಸಿಎಂ ಆಪ್ತರ ಬಳಿಯೇ ಉತ್ತರ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ.  ಈಗ ವಯಸ್ಸು ಕೂಡ ಇಲ್ಲ. ಗೌರವಯುತ ಸಾರ್ವಜನಿಕ ಬದುಕು ಇಲ್ಲೇ ಮುಗಿಯಲಿ. ಇಲ್ಲಿ ತನಕ ಆ ರೀತಿ ಏನೂ ಚರ್ಚೆ ನಡೆದಿಲ್ಲ. ಒಬಿಸಿ ಸಭೆಯ ನೇತೃತ್ವದ ಬಗ್ಗೆ ದೆಹಲಿಯ ನಾಯಕರಿಗೆ ವಿವರಣೆ ಕೊಡುತ್ತೇನೆ ಎಂದು ಹೇಳಿದರು.  ಇದನ್ನೂ ಓದಿ: ಶಾಲಾ ವಾಹನಕ್ಕೆ ರೈಲು ಡಿಕ್ಕಿ 3 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

 

ಎಐಸಿಸಿ ಒಬಿಸಿ ಸಲಹಾ ಮಂಡಳಿಯಲ್ಲಿ (OBC Advisory Panel) ಸ್ಥಾನ ಪಡೆದ ಹಿನ್ನೆಲೆಯಲ್ಲಿ ಗುರುವಾರ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿಎಂ ಮುಂದಾಗಿದ್ದು ಸ್ಪಷ್ಟನೆ ಕೇಳಲು ಬಯಸಿದ್ದಾರೆ.

ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ.‌ ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಒಬಿಸಿ ಸಲಹಾ ಮಂಡಳಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ.‌ ಸಭೆಯ ಆತಿಥ್ಯವನ್ನು ಮುಖ್ಯಮಂತ್ರಿಗಳು ವಹಿಸಿಕೊಂಡಿದ್ದು ಸಭೆ ಕೆಪಿಸಿಸಿ (KPCC) ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜನೆಗೊಂಡಿದೆ. ಇದನ್ನೂ ಓದಿ: ಪ್ರಿಯಕರನ ನಂಬಿ ಗಂಡನ ಬಿಟ್ಟು ಬಂದ ಮಹಿಳೆ ಗರ್ಭಿಣಿ ಮಾಡಿ ಪರಾರಿಯಾದ ಯುವಕ!

ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಐಸಿಸಿಯ ಒಬಿಸಿ ಘಟಕದ ಸಲಹ ಸಮಿತಿಗೆ ಬೇರೆ ಬೇರೆ ರಾಜ್ಯದ ಪ್ರಮುಖ 24 ಒಬಿಸಿ ನಾಯಕರನ್ನ ಸಲಹೆಗಾರರಾಗಿ ನೇಮಿಸಲಾಗಿದೆ.

Share This Article