– ರೇಸ್ ನಡೆಸೋಕೆ ನಮ್ಮ ಬಳಿ ಕುದುರೆಗಳೇ ಇಲ್ಲ
– ಬಿಜೆಪಿ ಅವ್ರಿಗೆ ಲೆಕ್ಕ ಹಾಕೋಕೆ ಬರೊಲ್ಲ
ಬೆಂಗಳೂರು: ನಾನು ಸಿಎಂ ಅಥವಾ ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ. ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಲೋಕೋಪಲೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೇಸ್ ನಡೆಸಲು ನಮ್ಮ ಬಳಿ ಕುದುರೆಗಳೇ ಇಲ್ಲ. ಇನ್ನು ಎಲ್ಲಿಂದ ರೇಸ್‍ನಲ್ಲಿ ನಿಲ್ಲುವುದು. ನನಗೆ ನೀಡಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ನಗೆ ಬೀರಿದರು.
Advertisement
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿಯು 18ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಜೆಡಿಎಸ್ 5ರಿಂದ 6 ಸೀಟು ಗೆಲ್ಲುತ್ತದೆ. 7 ಸೀಟು ಗೆದ್ದರೂ ಆಶ್ಚರ್ಯ ಪಡಬೇಡಿ. ಆದರೆ ಬಿಜೆಪಿಯವರಿಗೆ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಮೇ 23ರ ನಂತರ ಸಮಾಧಾನ ಆಗುತ್ತಾರೆ. ನಾನು ಹೇಳಿದ್ದು ಯಾವತ್ತು ಸುಳ್ಳು ಆಗಿಲ್ಲ. ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಅವರಿಗೂ ಪಂಡರಾಪುರಕ್ಕೆ ಹೋಗುವುದಕ್ಕೆ ಹೇಳಿ. ಬಿಜೆಪಿಯವರು ಎಷ್ಟೇ ಡೇಟ್ ಕೊಟ್ಟರು ಸರ್ಕಾರಕ್ಕೆ ಬೀಳಲ್ಲ ಎಂದು ಭವಿಷ್ಯ ನುಡಿದರು.
Advertisement
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜೀವ್ ಗಾಂಧಿಯವರು ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡ ಅವರಿಗೆ ಗೊತ್ತಿದೆ. ಕಾಲ ಬಂದಾಗ ಅವರ ಕೆಲಸದ ಬಗ್ಗೆ ಹೇಳುತ್ತೇನೆ. ರಾಜೀವ್ ಗಾಂಧಿ ಅವರು ಪ್ರಾಮಾಣಿಕ ರಾಜಕಾರಣಿ ಎಂದರು.