ಬೆಂಗಳೂರು: ಭಾನುವಾರ ನಡೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್ ಮಾಡಿದ ಧೋನಿ ವಿರುದ್ಧ ಮಾಜಿ ನಾಯಕ ಸೌರವ್ ಗಂಗೂಲಿ ಪರೋಕ್ಷವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ನಾಸೀರ್ ಹುಸೇನ್ ಮತ್ತು ಸೌರವ್ ಗಂಗೂಲಿ ಅವರು ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಲಾಗ್ ಓವರ್ ನಲ್ಲಿ ಧೋನಿ ಒಂಟಿ ರನ್ ತೆಗೆಯುತ್ತಿರುವುದನ್ನು ಕಂಡು ನಾಸೀರ್ ಹುಸೇನ್, ಭಾರತ ಯಾವುದೇ ಪ್ರತಿರೋಧ ತೋರದೇ ಸೋಲನ್ನು ಒಪ್ಪಿಕೊಳ್ಳುತ್ತಿದೆಯಾ ಎನ್ನುವ ಪ್ರಶ್ನೆಗೆ ಗಂಗೂಲಿ, ಈ ಪ್ರಶ್ನೆಗೆ ನಾನು ವಿವರಣೆ ನೀಡಲ್ಲ ಎಂದು ಹೇಳಿದರು.
Advertisement
Sourav Ganguly:
I dont have any explanation for that single…
Nasir Hussain:
Indian fans are leaving!
Indian fans here would want to see Dhoni give it a go…
commentators cant belive it..#INDvENG #indiavsEngland #ENGvIND #TeamIndia #CWC2019 #DhoniAtCWC19 #MSDhoni #Dhoni pic.twitter.com/yML6aWolhv
— Syed Yasir (@imSyed_Yasir) June 30, 2019
Advertisement
ಧೋನಿ ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕನಿಷ್ಟ ಈ ಸಮಯದಲ್ಲಿ ಬ್ಯಾಟ್ ಬೀಸಬೇಕು. ಭಾರತದ ಅಭಿಮಾನಿಗಳು ಸ್ಟೇಡಿಯಂ ತೊರೆಯುತ್ತಿದ್ದಾರೆ ಎಂದು ನಾಸೀರ್ ಹುಸೇನ್ ಹೇಳಿದ್ದಕ್ಕೆ ಗಂಗೂಲಿ, ನನಗೆ ಈ ಇಬ್ಬರು ಆಟಗಾರರು ಏನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಈ ಪ್ರಶ್ನೆಗೆ ನನ್ನ ಬಳಿ ಯಾವುದೇ ಉತ್ತರವಿಲ್ಲ. 5 ವಿಕೆಟ್ ಉಳಿಸಿಕೊಂಡು 20-30 ರನ್ ಚೇಸ್ ಮಾಡದೇ ಆಟವನ್ನು ಅಂತ್ಯಗೊಳಿಸುವುದು ಸರಿಯಲ್ಲ ಎಂದು ಈ ವೇಳೆ ತನ್ನ ಅಭಿಪ್ರಾಯವನ್ನು ತಿಳಿಸಿದರು.
Advertisement
Advertisement
ಇಂಗ್ಲೆಂಡ್‍ನ ಬರ್ಮಿಗ್ಹ್ಯಾಮ್‍ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ 31 ರನ್‍ಗಳ ಗೆಲುವು ಸಾಧಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಭಾರತ ಕೊನೆಯ 5 ಓವರ್ ಗಳಲ್ಲಿ ಮಂದಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಧೋನಿ ಹಾಗೂ ಕೇದಾರ್ ಜಾಧವ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಂಗ್ಲೆಂಡ್ ನೀಡಿದ 338 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಭಾರತಕ್ಕೆ ಕೊನೆಯ 30 ಎಸೆತಗಳಲ್ಲಿ ಗೆಲ್ಲಲು 71 ರನ್‍ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಮತ್ತು ಜಾಧವ್ ಅವರು ಓವರ್ ಒಂದಕ್ಕೆ 14 ರನ್‍ಗಳ ಅವಶ್ಯಕತೆ ಇದ್ದರೂ ನಿಧಾನವಾಗಿ ಬ್ಯಾಟ್ ಬೀಸಿದ ಈ ಜೋಡಿ ಕೊನೆಯ 30 ಎಸೆತಗಳಲ್ಲಿ ಕೇವಲ 40 ರನ್ ಪೇರಿಸಿತು.
Disappointing finish. A run-a-ball partnership can't win games. Was exciting till Pandya was in.
— Harsha Bhogle (@bhogleharsha) June 30, 2019
ಪಂದ್ಯಕ್ಕೆ ಅಗತ್ಯವಿರುವ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸದ ಈ ಜೋಡಿ ಕೊನೆಯ ಐದು ಓವರ್ ಗಳಲ್ಲಿ 3 ಬೌಂಡರಿ ಮತ್ತು ಕೇವಲ ಒಂದು ಸಿಕ್ಸರ್ ಸಿಡಿಸಿ 41 ರನ್‍ಗಳನ್ನು ಹೊಡೆಯಿತು. ಇದರಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ (4, ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಕೇದಾರ್ ಜಾಧವ್ ಅವರು 13 ಎಸೆತದಲ್ಲಿ ಒಂದು ಬೌಂಡರಿಯೊಂದಗೆ ಕೇವಲ 12 ರನ್ ಹೊಡೆದಿದ್ದಾರೆ. ಇದರಲ್ಲಿ ಕೊನೆಯ ಓವರ್ ನಲ್ಲಿ ಮೊದಲ ಎಸೆತದಲ್ಲಿ ಧೋನಿ ಒಂದು ಸಿಕ್ಸರ್ ಸಿಡಿಸಿದರೆ ಅದೇ ಓವರ್ ನ 4 ಎಸೆತದಲ್ಲಿ ಜಾಧವ್ ಒಂದು ಬೌಂಡರಿ ಸಿಡಿಸಿದರು.
If there was any team that had the ability to stop India’s winning run. It was England. Dhoni’s approach in the last few overs however was baffling. ????
— Sanjay Manjrekar (@sanjaymanjrekar) June 30, 2019
ಉತ್ತಮ ಫಿನಿಶರ್ ಎಂದೇ ಹೆಸರುವಾಸಿಯಾದ ಧೋನಿ ಅವರು ಕಳೆದ ಕೆಲ ಪಂದ್ಯಗಳಿಂದ ಅವರು ಆಟದ ಕ್ಷಮತೆ ಕಡಿಮೆ ಆಗಿದೆ ಅವರು ಕೊನೆಯ ಓವರ್‍ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಲು ಕಷ್ಟ ಪಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. ವಿಶ್ವಕಪ್‍ನಲ್ಲಿ ಸೋಲನ್ನೇ ಕಾಣದ ಭಾರತ ತಂಡ ಈ ಪಂದ್ಯದಲ್ಲಿ ಸೋತಿದ್ದು ಇದಕ್ಕೆ ಕಾರಣ ಧೋನಿ ಮತ್ತು ಕೇದಾರ್ ಜಾಧವ್ ಅವರು ಮಂದಗತಿಯ ಆಟವೇ ಕಾರಣ ಎನ್ನಲಾಗಿದೆ. ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಔಟ್ ಆದ ಹಾರ್ದಿಕ್ ಪಾಂಡ್ಯ ರೀತಿಯಲ್ಲೇ ಈ ಜೋಡಿಯು ಬ್ಯಾಟ್ ಬೀಸಿದ್ದರೆ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಅಭಿಮಾನಿಗಳು ಮತ್ತು ಕೆಲ ಕ್ರಿಕೆಟ್ ಪಂಡಿತರು ಬೇಸರ ವ್ಯಕ್ತಪಡಿಸಿದ್ದಾರೆ.
Not sure what Kedar and Dhoni trying to do here. Its not about winning but its about showing the intent to win….
— Broken Cricket (@BrokenCricket) June 30, 2019
ಇನ್ನೂ ಕೆಲ ಧೋನಿ ಅಭಿಮಾನಿಗಳು ಈ ಪಂದ್ಯದಲ್ಲಿ ಧೋನಿ 135.48 ರ ಉತ್ತಮ ಸ್ಟ್ರೈಕ್ ರೇಟ್‍ನಲ್ಲೇ ಬ್ಯಾಟ್ ಮಾಡಿದ್ದಾರೆ ಎಂದು ಧೋನಿ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ.