ಬೆಂಗಳೂರು: ನಾನೇಕೆ ರಾಜೀನಾಮೆ ಕೊಡಬೇಕು. ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ. ವಿದೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದಿರುಗಿ ಬಂದಿದ್ದಾರೆ. ಅವರಿಗೆ ವಿಶ್ ಮಾಡಲು ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಅಂತಾ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ವಿದೇಶಕ್ಕೂ ಹೋಗುವ ಮುನ್ನ ವಿಶ್ ಮಾಡಿದ್ದೆ, ಇದೀಗ ವಿದೇಶದಿಂದ ಬಂದಿದ್ದಾರೆ. ನಮ್ಮ ನಾಯಕರನ್ನು ಮಾತನಾಡಿಸಲು ಬಂದಿದ್ದೇನೆ. ನಾನು ಸಚಿವ ಅಂದ ಮೇಲೆ ಶಾಸಕರು ಬರುವುದು ಸಹಜ. ನಾನು ಯಾರ ಜೊತೆಯಲ್ಲಿ ಯಾವುದೇ ಪ್ರತ್ಯೇಕ ಸಭೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರಕ್ಕೆ ಮಂಗಳವಾರ ಕೊನೆಯ ದಿನ?
Advertisement
Advertisement
ಸಿದ್ದರಾಮಯ್ಯನವರು ನನ್ನನ್ನು ಕರೆದಿಲ್ಲ, ನಾನಗಿಯೇ ಬಂದಿದ್ದೇನೆ. ಕಳೆದ ಮೂರ್ನಾಲ್ಕು ತಿಂಗಳನಿಂದ ಶಾಸಕರು ನಮ್ಮ ನಿವಾಸಕ್ಕೆ ಬರುತ್ತಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ನನ್ನ ಬಳಿ ಬಂದಿರುತ್ತಾರೆ. ಶಾಸಕರು ಮನೆಗೆ ಬರೋತ್ತಿರೋದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಅಂತಾ ಅಂದ್ರು. ಇದನ್ನೂ ಓದಿ: ನಾಳೆ, ನಾಡಿದ್ದರ ಒಳಗಡೆ ಸರ್ಕಾರ ಬಿದ್ದು ಹೋಗುತ್ತೆ: ಶೆಟ್ಟರ್ ಭವಿಷ್ಯ
Advertisement
ಮಂಗಳವಾರ ಕೇಂದ್ರ ಗೃಹ ಸಚಿವ ಹಾಗೂ ಹಿರಿಯ ಮುಖಂಡ ರಾಜನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ. ಮಂಗಳವಾರ ಪಕ್ಷದ ಮುಖಂಡರುಗಳೊಂದಿಗೆ ಪ್ರಸಕ್ತ ರಾಜ್ಯರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೇ ಕಾಂಗ್ರೆಸ್ಸಿನ ಅಸಮಾಧಾನಗೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಭೀಮಾನಾಯ್ಕ್ ರವರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ವೇಳೆ ತೆಗೆದುಕೊಳ್ಳುವ ತೀರ್ಮಾನವನ್ನು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುತ್ತಾರೆ ಎನ್ನಲಾಗಿದೆ. ಇದನ್ನೂ ಓದಿ: ಸಕಲೇಶಪುರ ಶಾಸಕ ಕುಮಾರಸ್ವಾಮಿ ಪತ್ನಿಯಿಂದ ಆಪರೇಷನ್ ಕಮಲದ ರಹಸ್ಯ ಬಯಲು
Advertisement
ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಅಡೆಚಣೆಗಳಿಲ್ಲದೇ ಸಂಪೂರ್ಣವಾಗಿ 5 ವರ್ಷ ಪೂರೈಸುತ್ತದೆ ಎನ್ನುವ ಭರವಸೆ ನೀಡುತ್ತಿದ್ದಾರೆ. ಆದರೆ ಇತ್ತ ಬಿಜೆಪಿಯಲ್ಲಿ ದಿಢೀರ್ ಬೆಳವಣಿಗೆಗಳು ಚಿಗುರುತ್ತಿದ್ದು, ಎಲ್ಲಾ ಶಾಸಕರ ಸಭೆ ಕರೆದಿರುವುದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಗಾಣಗಾಪುರಕ್ಕೆ ಸಿಎಂ ಎಚ್‍ಡಿಕೆ, ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು? – ಇಲ್ಲಿದೆ ಇನ್‍ಸೈಡ್ ಸ್ಟೋರಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Py_hVXFZa_c