ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ವಿಚಾರವಾಗಿ ನಾನೇನೂ ಮಾತನಾಡಲ್ಲ. ನಾನು ಹಳೆಯದನ್ನಲ್ಲ ಮರೆತಿದ್ದು, ನನ್ನ ಇಲಾಖೆ ಬಗ್ಗೆ ಬಿಟ್ಟು ಮಾಧ್ಯಮಗಳಿಗೆ ಇನ್ಯಾವ ವಿಚಾರದ ಬಗ್ಗೆ ಮಾತಾಡಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಡಿತ ಮಾಡಬೇಡಿ ಅಂತ ನಾನು ಸಿಎಂಗೆ ಪತ್ರ ಬರೆದಿದ್ದೆ. ಬಡವರ ಅಕ್ಕಿ ಕಸಿದುಕೊಂಡ್ರೆ ಅದು ತಪ್ಪಾಗುತ್ತದೆ. ಬಜೆಟ್ ನಂತರವು ನಾನು ಸಿಎಂಗೆ ಮನವಿ ಮಾಡಿದ್ದೆ. ಆಗ ಸಿಎಂ 7 ಕೆಜಿ ಕೊಡೋದಾಗಿ ಹೇಳಿದ್ರು. ಆದ್ರೆ ಈಗ ಕೊಡೋದಿಲ್ಲ ಅನ್ನೋದ್ರ ಬಗ್ಗೆ ನಿರ್ಧಾರ ಮಾಡಿರೋದು ನನಗೆ ಗೊತ್ತಿಲ್ಲ.
Advertisement
Advertisement
ವಕ್ಫ್ ಆಸ್ತಿ ಕುರಿತಾದ ಅನ್ವರ್ ಮಾಣಿಪ್ಪಾಡಿ ವರದಿಯ ವಿಚಾರವಾಗಿ ಸಿಬಿಐ ತನಿಖೆ ವಿಷಯದಲ್ಲಿ ಯೂ ಟರ್ನ್ ಹೊಡೆದಿದ್ದಾರೆ ಅನ್ನೋ ಬಿಜೆಪಿ ಆಯನೂರು ಮಂಜುನಾಥ್ ಹೇಳಿಕೆಗೆ ಜಮೀರ್ ಅಹ್ಮದ್, ನಾನು ನೇರಾನೇರ ಮಾತಾಡುವವನು. ಬಿಜೆಪಿ ಅವಧಿಯಲ್ಲಿ ಅನ್ವರ್ ಮಾಣಿಪ್ಪಾಡಿ ವಕ್ಫ್ ಪ್ರಕರಣ ಕುರಿತು ವರದಿ ಕೊಟ್ಟಿದ್ರು. ಆಗಲೇ ಯಾಕೆ ಬಿಜೆಪಿ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐಗೆ ಕೊಡಲಿಲ್ಲ? ಈಗ ನಮಗೆ ಸಿಬಿಐಗೆ ಕೊಡಿ ಎಂದು ಒತ್ತಾಯಿಸ್ತಿದ್ದಾರೆ. ಸದ್ಯ ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಈ ಹಂತದಲ್ಲಿ ಪ್ರಕರಣ ಸಿಬಿಐಗೆ ಕೊಡುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
Advertisement
ನಾನು ಸದನದಲ್ಲಿ ಸಿಬಿಐಗೆ ಪ್ರಕರಣ ಕೊಡ್ತೀನಿ ಅಂತ ಹೇಳಿಲ್ಲ, ಅದನ್ನ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದೆ. ಬಿಜೆಪಿಯವರ ಆರೋಪದಲ್ಲಿ ಸತ್ಯ ಇಲ್ಲ. ವಕ್ಫ್ ಆಸ್ತಿ ಕಬಳಿಕೆ ಕುರಿತ ಮಾಣಿಪ್ಪಾಡಿ ವರದಿಯಲ್ಲಿ ಸತ್ಯಾಂಶ ಇಲ್ಲ. ಒಂದು ವೇಳೆ ಸತ್ಯಾಂಶ ಇದ್ದಿದ್ದರೆ ಬಿಜೆಪಿಯವರೇ ತಮ್ಮ ಅವಧಿಯಲ್ಲಿ ಸಿಬಿಐಗೆ ಕೊಡುತ್ತಿದ್ದರು ಎಂದು ಜಮೀರ್ ಅಹ್ಮದ್ ತಿರುಗೇಟು ನೀಡಿದರು.