ಬೆಂಗಳೂರು: ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ. ಹೈಕಮಾಂಡ್ ಬಳಿ ಉಚ್ಚಾಟನೆ ಮರುಪರಿಶೀಲನೆಗೆ ಮನವಿ ಮಾಡುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಉಚ್ಚಾಟನೆಯಾದ ನಾಲ್ಕು ದಿನಗಳ ನಂತರ ಇಂದು ರೆಬೆಲ್ ನಾಯಕ ಯತ್ನಾಳ್ ಮಾತನಾಡಿದರು. ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿಗೆ ಮಾತಾಡಿದ ಅವರು, ಮೂರನೇ ಬಾರಿಗೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ತುಳಿಯೋದಕ್ಕೆ ಹೊರಟಿದ್ದಾರೆ. ಮೂರು ನನ್ನ ಲಕ್ಕಿ ನಂಬರ್. ಈ ಸಲ ಅವರೇ ನಾಶ ಆಗ್ತಾರೆ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್ ಬಾಂಬ್
ಪಕ್ಷದಿಂದ ಉಚ್ಚಾಟನೆ ಮಾಡಿದ್ದಕ್ಕೆ ಮುಜುಗರ ಆಗಿಲ್ಲ, ಹಿನ್ನಡೆ ಆಗಿಲ್ಲ. ಉಚ್ಚಾಟನೆ ಮರುಪರಿಶೀಲನೆಗೆ ನಾನು ಹೈಕಮಾಂಡ್ ಬಳಿ ಮನವಿ ಮಾಡಲ್ಲ, ನಮ್ಮ ತಂಡದವರು ಮನವಿ ಮಾಡ್ತಾರೆ. ಯಡಿಯೂರಪ್ಪ, ಮಗ ವಿಜಯೇಂದ್ರ ಕೂಡಿ ಉಚ್ಚಾಟನೆಗೆ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದರು. ಉಚ್ಚಾಟನೆ ಮಾಡಿದ್ರೆ ಬಿಜೆಪಿ ಬಿಟ್ ಹೋಗ್ತಾರೆ ಅಂತ ಮಾಡಿಸಿದ್ದಾರೆ. ನಾನು ಪಕ್ಷದಲ್ಲಿ ಇರಲಿ, ಬಿಡಲಿ. ಅಪ್ಪ ಮಗನಿಂದ ಈ ಪಕ್ಷಕ್ಕೆ ಬಿಡುಗಡೆಗೊಳಿಸುವರೆಗೂ ಹೋರಾಟ ಮಾಡ್ತೀನಿ ಎಂದು ಶಪಥ ಮಾಡಿದರು.
ಒಬ್ಬ ಹಿಂದೂ ನಾಯಕನನ್ನ ಬಿಜೆಪಿ ಇವತ್ತು ನಡೆಸಿಕೊಂಡ ರೀತಿಯನ್ನು ಇಡೀ ರಾಜ್ಯ ನೋಡ್ತಿದೆ. ಹಿಂದೂ ನಾಯಕರನ್ನ ಮುಗಿಸಬೇಕು ಅನ್ನುವ ಕಾರ್ಯತಂತ್ರ ನಡೀತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಲಿಂಗಾಯತರು ಯಡಿಯೂರಪ್ಪ ಜೊತೆಗಿಲ್ಲ, ಜನರೇ ಹೊಸ ಪಕ್ಷ ಕಟ್ಟಲು ಸಲಹೆ ಕೊಡ್ತಿದ್ದಾರೆ – ಯತ್ನಾಳ್